ಸುಳ್ಯ:ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮರಾಠ ಕ್ಷತ್ರಿಯ ಸೇವಾ ಸಂಘ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ399 ನೇ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮವು ಮರಾಠ ಕ್ಷತ್ರಿಯ ಸೇವಾ ಸಂಘದ ಕಾಂತಮಂಗಲದ ನಿವೇಶನದಲ್ಲಿ ನಡೆಯಿತು.ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಶಹೀದ್ ತೆಕ್ಕಿಲ್ ರವರು ವಹಿಸಿದರು, ಉದ್ಘಾಟನೆಯನ್ನು ಸುಳ್ಯ ಉಪ ತಹಶೀಲ್ದಾರ್ ಎಂ.ಆರ್.ಚಂದ್ರಕಾಂತ್ ನೆರವೇರಿಸಿದರು.ಮುಖ್ಯ ಅತಿಥಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಮರಾಠ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಮಾಧವ ರಾವ್ ಜಾಧವ ಉಪಸ್ಥಿತರಿದ್ದರು. ಶಾರದಾ ಪ್ರಾರ್ಥಿಸಿದರು. ಚಂದ್ರಶೇಖರ ಜಾಧವ ಕೇರ್ಪಳ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ರಾವ್ ವಂದಿಸಿದರು.ದಯಾನಂದ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.






