ಸುಳ್ಯ: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಟ್ಟ ಎಂಬಲ್ಲಿ ಬಹುಕಾಲದ ಬೇಡಿಕೆಯಾದ ಶೆಟ್ಟಿಕಟ್ಟ-ಬೈಲು ಸಂಪರ್ಕ ಸೇತುವೆಗೆ ರೂ. 2.00 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಗುದ್ದಲಿಪೂಜೆ

ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ದ.ಕ. ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ವೆಂಕಟ್ ದಂಬೆಕೋಡಿ, ಗ್ರಾ.ಪಂ ಸದಸ್ಯರಾದ ಅಶ್ವಥ್ ಯಲದಾಳು,ಪುಷ್ಪರಾಜ್ ಪಡ್ಪು,ಪಕ್ಷದ ಪ್ರಮುಖರಾದ ಡ್ಯಾನಿ ಯಲದಾಳು,ಉದಯ ಶಿವಾಲ ಹಾಗೂ ಊರಿನ ಹಿರಿಯರು,ಫಲಾನುಭವಿಗಳು ಉಪಸ್ಥಿತರಿದ್ದರು.