ಶೇಣಿ:ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಯುವ ನಿಧಿ ಯೋಜನೆಯ ಉಚಿತ ಮಾಹಿತಿ ಮತ್ತು ನೊಂದಾವಣೆ ಕೇಂದ್ರ ಇಂದಿರಾ ಸೇವಾ ಕೇಂದ್ರ ಶೇಣಿಯಲ್ಲಿ ಕಾರ್ಯಾರಂಭಗೊಂಡಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಉದ್ಘಾಟನೆ ನೆರವೇರಿಸಿ, ಶುಭಹಾರೈಸಿದರು.
ವೇದಿಕೆಯಲ್ಲಿ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಯಪ್ರಕಾಶ್ ರೈ , ಕೆಪಿಸಿಸಿ ಮಾಜಿ ಕಾರ್ಯದರ್ಶಿ, ರಾಜೀವಿ ರೈ, ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ನಂದರಾಜ್ ಸಂಕೇಶ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ರಾಮಯ್ಯ ರೈ, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟ್ರಮಣ ಗೌಡ ಇಟ್ಟಿಗುಂಡಿ , ಮೀನಾಕ್ಷಿ ಚೂಂತಾರು ಉಪಸ್ಥಿತರಿದ್ದರು.
ಅಮರಪಡ್ನೂರು ಗ್ರಾಮದ ಫಲಾನುಭವಿಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಚೂಂತಾರು ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇವರ ಪತ್ನಿ ಶೋಭಾ ಅಶೋಕ್ ಸಹಕರಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಬೆಳ್ಳಾರೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಅನೀಲ್ ರೈ ಪುಡ್ಕಜೆ, ರವಿ ಕುಮಾರ್ ಅಕ್ಕೊಜಿಪಾಲ್, ಕುಮಾರ್ ಕೂಟೇಲು ಗೋಪಾಲಕೃಷ್ಣ ಪಾಡಾಜೆ, ಹರಿಯಪ್ಪ ಪೂಜಾರಿ, ಕೆ ಬಿ ನಾಯ್ಕ ಪೊನಡ್ಕ, ಕಮಲ ನೇಣಾರು, ಬಾಲಕಿ ಕಜೆಮೂಲೆ ಶಿವರಾಮ ಚೂಂತಾರು ಹಾಗೂ ಇತರ ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.