ಸುಳ್ಯ:ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹೆಣ್ಣು ಮಕ್ಕಳಿಗೆ ಪಿಯುಸಿ ಮತ್ತು ಧಾರ್ಮಿಕ ಶರೀಅತ್ ಕೋರ್ಸ್ ಜಂಟಿಯಾಗಿ ಕಲಿಸುವ ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ವಾರ್ಷಿಕ ಸಮ್ಮೇಳನವು ಜೂನ್ 24 ಮತ್ತು 25 ರಂದು ಕಲ್ಲುಗುಂಡಿ ಜುಮಾ ಮಸೀದಿ ವಠಾರದಲ್ಲಿ
ನಡೆಯಲಿದೆ ಎಂದು ಕಲ್ಲುಗುಂಡಿ ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಅಹ್ಮದ್ ನಈಂ ಫೈಝಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದೇಶದ ಪ್ರತಿಷ್ಠಿತ ಇಸ್ಲಾಮಿಕ್ ಶೈಕ್ಷಣಿಕ ಸಂಸ್ಥೆಯಾದ S.K.I.M.V.B ಇದರ ಭಾಗವಾಗಿ ಕಾರ್ಯಾಚರಿಸುತ್ತಿರುವ C.S.W.C ( COUNCIL OF SAMASTHA WOMEN’S COLLEGES ) ಯ ‘ ಫಾಳಿಲಾ ‘ ಕೋರ್ಸನ್ನು ನೀಡುವ ಕಲಿಕೆಯ ಜೊತೆಗೆ ಮಾದರಿ ಮಹಿಳೆಯನ್ನು ಸಜ್ಜುಗೊಳಿಸಲು ಪೂರಕವಾದ ಎಲ್ಲಾ ರೀತಿಯ ತರಬೇತಿಯನ್ನು ನಮ್ಮ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿದೆ.
ಈ ವರ್ಷದಿಂದ ಕಂಪ್ಯೂಟರ್ ಮತ್ತು ಟೈಲರಿಂಗ್ ತರಬೇತಿ ನೀಡಲು ಬೇಕಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಒಂದೇ ಸೂರಿನಲ್ಲಿ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣದ ಜೊತೆಗೆ ಆಧುನಿಕ ಯುಗದಲ್ಲಿ ಅನಿವಾರ್ಯವಾಗಿ ಮಹಿಳೆಯರಿಗೆ ದೊರಕಬೇಕಾದ ಪ್ರಾಥಮಿಕ ಮತ್ತು ಮೂಲಭೂತ ಕೌಶಲ್ಯಗಳನ್ನು ಕಲಿಸುವ ಈ ಶೈಕ್ಷಣಿಕ ಸಂಸ್ಥೆಯಾಗಿದೆ.ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಸಮ್ಮೇಳನ ಹಾಗೂ ಎರಡು ದಿನಗಳ ಧಾರ್ಮಿಕ ಪ್ರಭಾಷಣ ಹಮ್ಮಿಕೊಳ್ಳಲಾಗಿದೆ.
24 ರಂದು ಸಂಜೆ 7ಕ್ಕೆ ಹಂಝ ಮಿಸ್ಬಾಹಿ ಓಟಪದವು ಅವರು ‘ಇಸ್ಲಾಮಿನಲ್ಲಿ ಯುವಕ ಮತ್ತು ಯುವತಿಯರಿಗೆ ಶಿಕ್ಷಣದ ಅನಿವಾರ್ಯತೆ’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಎಂ.ಜೆ.ಎಂ.ಪೇರಡ್ಕ ಇದರ ಖತೀಬರಾದ ರಿಯಾಝ್ ಫೈಝಿ ದುಃವಾ ನೆರವೇರಿಸಲಿದ್ದಾರೆ. ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಆಲೀ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಜೂ.25 ರಂದು ಸಂಜೆ 7ಕ್ಕೆ ನಡೆಯುವ ಸಮಾರಂಭದಲ್ಲಿ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನುಂಗೈ ಕೇರಳ ಅವರು ದುವಾಃ ನೆರವೇರಿಸಲಿದ್ದಾರೆ. ಮಾಡನ್ನೂರು ನೂರುಲ್ ಹುದಾ ಅಕಾಡೆಮಿಯ ಪ್ರಾಂಶುಪಾಲರಾದ ಹನೀಫ್ ಹುದವಿ ಮುಖ್ಯ ಭಾಷಣ ಮಾಡಲಿದ್ದಾರೆ. ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಇಸಾಕ್ ಬಾಖವಿ ದುಃವಾ ನೆರವೇರಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಎ.ಕೆ.ಹಸೈನಾರ್, ಉಪಾಧ್ಯಕ್ಷ ತಾಜ್ ಮಹಮ್ಮದ್, ಕೋಶಾಧಿಕಾರಿ ಎ.ಕೆ.ಇಬ್ರಾಹಿಂ, ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕಿಫಾಯತ್ತುಲ್ಲಾ, ಪ್ರಧಾನ ಕಾರ್ಯದರ್ಶಿ ಶಮೀರ್ ಕೆ.ಎಂ, ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜಿನ ಸಮಿತಿ ಸದಸ್ಯರಾದ ಆಶಿಕ್ ಕೆ.ಹೆಚ್, ಸ್ವಾದಿಕ್ ಎಸ್.ಎ.ಉಪಸ್ಥಿತರಿದ್ದರು.