ಸುಳ್ಯ:ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ.ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ಶೇಕಡ 100 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ 6 ಮಂದಿ ಡಿಸ್ಟಿಂಕ್ಷನ್ನಲ್ಲಿ ಮತ್ತು 5 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣೀಜ್ಯ ವಿಭಾಗದಲ್ಲಿ
8 ಮಂದಿ ಡಿಸ್ಟಿಂಕ್ಷನ್ನಲ್ಲಿ 6 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ, ವಿಜ್ಞಾನ ವಿಭಾಗದಲ್ಲಿ 8 ಮಂದಿ ಡಿಸ್ಟಿಂಕ್ಷನ್ನಲ್ಲಿ ಹಾಗೂ 14 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 587 ಅಂಕ ಪಡೆದಿರುವ ಅನುಷ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ರಾಜ್ಯದಲ್ಲಿ 10ನೇ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ 577 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಜ್ಞಾ. ಎಸ್.555 ಅಂಕಗಳೊಂದಿಗೆ ಪ್ರಥಮ ಸ್ಟಾನಿಗಳಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ದ.ಕ.ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್, ಪದಾಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ ಕೆ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಅನುಷ್ಯ, ಪ್ರಜ್ಞಾ, ಐಶ್ವರ್ಯ
ಕಲಾವಿಭಾಗ:
ಕಲಾ ವಿಭಾಗದಲ್ಲಿ ಅನುಷ್ಯ ರವರು 587 ಅಂಕ ಪಡೆದು ರಾಜ್ಯಕ್ಕೆ 10 ನೇ ಸ್ಥಾನ, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನೈತನ್ಯ ಸಿ 565 ಅಂಕ, ದಿವ್ಯಜ್ಯೋತಿ 552 ಅಂಕ, ದೀಪಿಕ ಎನ್. 530 ಅಂಕ, ಸ್ನೇಹ ಎ.ಕೆ. 526 ಅಂಕ, ಪ್ರಿಯದರ್ಶಿನಿ 510 ಅಂಕ.
ವಾಣೀಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿ ಪ್ರಜ್ನಾ ಎಸ್. 555 ಅಂಕ, ಜುಪೈದಾ ಪಿ.ಎ. 553 ಅಂಕ, ಸಮ್ನಾಜ್ ಎ.ಪಿ.544 ಅಂಕ, ಲಿಖಿತಾ ಪಿ.ಡಿ 537 ಅಂಕ, ಫಾತಿಮತ್ ಮಾಹಿರ 531 ಅಂಕ, ಮೇಘ 530 ಅಂಕ, ಮೌಲ್ಯಶ್ರೀ 528 ಅಂಕ, ದೀಕ್ಷಾ ಕೆ.ಬಿ. 522 ಅಂಕ
ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ 577 ಅಂಕ, ಸಪ್ನ ಕೆ.572 ಅಂಕ, ಫಾತಿಮತ್ ಅಜ್ಮಿಯಾ 564 ಅಂಕ, ಸುಷ್ಮ ಡಿ.ಪಿ 557 ಅಂಕ, ಧನ್ಯಕುಮಾರಿ ಆರ್. 544 ಅಂಕ, ಯಶಸ್ವಿ ಬಿ.ಎ. 540 ಅಂಕ, ಫಾತಿಮತ್ ಶಭಾನ 523 ಅಂಕ, ಶಮ್ನಾ ಬಿ. 515 ಅಂಕ ಗಳಿಸಿದ್ದಾರೆ.