ಸುಳ್ಯ:ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಮಡಪುರ ಶಾಂತಿನಗರ ಪೈಚಾರ್ ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.6ರಂದು ದೈವಸ್ಥಾನದ ಸನ್ನಿಧಿಯಲ್ಲಿ ನಡೆಯಿತು. ಕಾಲಾವಧಿ ನೇಮೋತ್ಸವ
ಮಾರ್ಚ್ 14 ರಿಂದ ಮೊದಲ್ಗೊಂಡು 15ರ ಸಂಜೆ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಮಧುಸೂದನ್ ಪಿ.ಎಂ. ಪ್ರದಾನ ಕಾರ್ಯದರ್ಶಿ ಕೆ.ಕೆ. ಬಾಲಕೃಷ್ಣ ಮೊಕ್ತೇಸರರಾದ ರಾಮಕೃಷ್ಣ ಎಸ್.ಎನ್, ಪ್ರಮುಖರಾದ ದಾಮೋದರ ಮಂಚಿ, ನಾರಾಯಣ ಎಸ್.ಎಂ ಪ್ರಶಾಂತ್ ಕನ್ನಡಕ, ಸುಂದರ ರೈ, ಗೋಪಾಲ ನಾಯ್ಕ, ಚಂದ್ರ ಶೇಖರ ನೂಜಾಡಿ, ರಾಮಚಂದ್ರ ನಾಯ್ಕ, ಆನಂದ ಗೌಡ ಉತ್ಸವ ಸಮಿತಿ ಅಧ್ಯಕ್ಷ ಪೃಥ್ವಿರಾಜ್, ಚಿನ್ನಪ್ಪ ಗೌಡ, ರಾಜಶ್ರೀ, ಭಾಗ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.







