ಸುಳ್ಯ: ಸುಳ್ಯದ ಸೇವಾಭಾರತಿ ಹೆಲ್ಪ್ಲೈನ್ ಟ್ರಸ್ಟ್ ನೇತೃತ್ವದಲ್ಲಿ
ಗ್ರಾಮ ಪಂಚಾಯತ್ ಜಾಲ್ಲೂರು ಮತ್ತು ದಾನಿಗಳ ನೆರವಿನಿಂದ ನಿರ್ಮಿಸಿದ ನೂತನ ಮನೆ ‘ಸೇವಾಂಜಲಿ’ಯ ಹಸ್ತಾಂತರ ಕಾರ್ಯಕ್ರಮ ಮೇ.29ರಂದು ಪೂ.10ಕ್ಕೆ ನಡೆಯಲಿದೆ.ಜಾಲ್ಲೂರು ಗ್ರಾಮದ ಕುಂದ್ರುಕೋಡಿ ಎಂಬಲ್ಲಿ ಲಕ್ಷ್ಮೀ ಎಂಬವರಿಗೆ ನಿರ್ಮಿಸಿ ಕೊಡುವ ಮನೆಯ
ಮನೆಯ ಕಾಮಗಾರಿ ಪೂರ್ಣಗೊಂಡಿದೆ. ಮನೆ ನಿಮಾಣಕ್ಕೆ ಒಟ್ಟು ರೂ 7 ಲಕ್ಷಗಳಷ್ಟು ವೆಚ್ಚವಾಗಿದ್ದು, ಈ ಪೈಕಿ ರೂ 2 ಲಕ್ಷವನ್ನು ಜಾಲ್ಲೂರು ಗ್ರಾಮ ಪಂಚಾಯತ್ ನೀಡಿರುತ್ತದೆ. ಇನ್ನುಳಿದ ಮೊತ್ತವನ್ನು ಸೇವಾಭಾರತಿ ಹೆಲ್ಪ್ಲೈನ್ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ದಾನಿಗಳನ್ನು ಹಾಗೂ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಲಾಗಿರುತ್ತದೆ. ನೂತನ ಮನೆ
‘ಸೇವಾಂಜಲಿ’ ಯನ್ನು ಮೇ.29ರಂದು ಲಕ್ಷ್ಮೀಯವರಿಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ.ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತಿರುಮಲೇಶ್ವರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ, ಉದ್ಯಮಿ ಕೇಶವ ಅಮೈ ಭಾಗವಹಿಸಲಿದ್ದಾರೆ ಎಂದು ಸೇವಾಭಾರತಿ ಹೆಲ್ಪ್ಲೈನ್ ಟ್ರಸ್ಟ್ನ ಅಧ್ಯಕ್ಷ ಡಾ.ಮನೋಜ್ ಕುಮಾರ್ ಎ.ಡಿ. ಹಾಗೂ ಕಾರ್ಯದರ್ಶಿ ಸುದರ್ಶನ ಎಸ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.