ಸುಳ್ಯ: ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್, ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಸುಳ್ಯ, ರಾಷ್ಟ್ರೀಯ ಸೇವಾ ಯೋಜನೆ ಕೆವಿಜಿ ಪಾಲಿಟೆಕ್ನಿಕ್, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಅಂಗನವಾಡಿ ಕೇಂದ್ರ ಬಳ್ಳಕ ಇವರ ಸಹಯೋಗದೊಂದಿಗೆ ಸೇವಾ ಸಮ್ಮೇಳನ, ರಾಜ್ಯಮಟ್ಟದ ನಾಯಕತ್ವ ತರಬೇತಿ, ಜಾನಪದ ಉತ್ಸವ ಹಾಗು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳು ಫೆ.25 ಮತ್ತು 26 ರಂದು
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಪುರ – ಬಳ್ಳಕ್ಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ನ ಅಧ್ಯಕ್ಷ ವಿಜೇತ್ ಶಿರ್ಲಾಲು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು ಕೆವಿಜಿ ಪಾಲಿಟೆಕ್ನಿಕ್ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳು ಸೇರಿ 2015ರಲ್ಲಿ ಎನ್.ಎಸ್.ಎಸ್. ಸೇವಾ ಸಂಗಮ ಎಂಬ ಟ್ರಸ್ಟ್ ರಚಿಸಿದೆ. ಟ್ರಸ್ಟ್ನ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಹಲವು ಶಾಲೆ, ಅಂಗನವಾಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ರಚನೆ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕಾಲನಿಗಳ ಸ್ವಚ್ಛತಾ ಕಾರ್ಯ, ಸ್ವಚ್ಛತಾ ಜಾಗೃತಿ, ವಿವಿಧ ಕಡೆ ನಾಯಕತ್ವ ತರಬೇತಿ ಶಿಬಿರಗಳನ್ನು ಆಯೋಜಿಸಿದೆ.
ಈ ಬಾರಿ ಗುತ್ತಿಗಾರಿನ ಹರಿಪುರ ಬಳ್ಳಕ ಶಾಲಾ ವಠಾರದಲ್ಲಿ ನಡೆಯುವ ಸೇವಾ ಸಮ್ಮಿಲನದ ಅಂಗವಾಗಿ ರಾಜ್ಯಮಟ್ಟದ ನಾಯಕತ್ವ ತರಬೇತಿ ಶಿಬಿರ, ಜಾನಪದ ಉತ್ಸವ ಹಾಗು ಸ್ಪರ್ಧೆ, ಸಾಂಸ್ಕೃತಿಕ ಸಂಭ್ರಮ, ಆರೋಗ್ಯ ಮಾಹಿತಿ, ಜಾನಪದ ಉತ್ಸವ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು. ಜಾನಪದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಮುಂಚಿತವಾಗಿ ಸಂಘಟಕರನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದರು. 25 ರಂದು ಬೆಳಿಗ್ಗೆ ತರಬೇತಿ ಉದ್ಘಾಟನೆ, ನಡೆದು ಬಳಿಕ ತರಬೇತಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 26 ರಂದು ತರಬೇತಿ, ಆರೋಗ್ಯ ಮಾಹಿತಿ, ಜಾನಪದ ಉತ್ಸವ, ಜಾನಪದ ಉತ್ಸವದ ಸ್ಪರ್ಧೆ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆವಿಜಿ ಪಾಲಿಟೆಕ್ನಿಕ್ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಬಿಳಿನೆಲೆ, ಸೇವಾ ಸಂಗಮದ ಅಧ್ಯಕ್ಷ ರಕ್ಷಿತ್ ಬೊಳ್ಳೂರು,ಸುಜಿತ್ ಎಂ.ಎಸ್, ಲೋಹಿತ್ ಆರ್. ಉಪಸ್ಥಿತರಿದ್ದರು.