

ಗೂನಡ್ಕ: ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ನ ಮಾಸಿಕ ಸಭೆಯು ಬದ್ರಿಯಾ ಜುಮಾ ಮಸೀದಿ ಗೂನಡ್ಕದ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು. ಅಸೋಸಿಯೇಶನ್ ಅಧ್ಯಕ್ಷ ಜಾಫರ್ ಸಾದಿಕ್ ಕುಂಭಕ್ಕೋಡ್ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ನಿಮಿತ್ತ ದುಬೈಗೆ ತೆರಳುತ್ತಿರುವ ಗೂನಡ್ಕದ ಬದ್ರಿಯಾ ಜುಮಾ ಮಸೀದಿಯ
ಆಡಳಿತ ಮಂಡಳಿಯ ಸದಸ್ಯ ಸಿದ್ದೀಕ್ ಗೂನಡ್ಕ ಅವರಿಗೆ ಅಲ್ ಅಮೀನ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಲಾಯಿತು.
ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮಹಮ್ಮದ್ ಅಲೀ ಸಖಾಫಿ ಹಾಗೂ ಅಸೋಸಿಯೇಶನ್ನ ಗೌರವಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಅಭಿನಂದಿಸಿ ಶುಭಹಾರೈಸಿದರು.
ಬದ್ರಿಯಾ ಜುಮಾ ಮಸೀದಿಯ ಸದರ್ ಮುಅಲ್ಲಿಂ ಹಬೀಬ್ ಹಿಮಮಿ, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎ.ಟಿ.ಹಸನ್ ದೊಡ್ಡಡ್ಕ, ಸಂಘಟನಾ ಕಾರ್ಯದರ್ಶಿ ಟಿ.ಬಿ.ಅಝೀಝ್, ಕೋಶಾಧಿಕಾರಿ ಡಿ.ಎಂ.ಅಬ್ದುಲ್ಲಾ, ಕಾರ್ಯದರ್ಶಿ ಜಿ.ಎಂ.ಅಬ್ದುಲ್ಲಾ, ನಿರ್ದೇಶಕರಾದ ಮಹಮ್ಮದ್ ಪೆಲ್ತಡ್ಕ ಉಪಸ್ಥಿತರಿದ್ದರು.