ಸುಳ್ಯ:ಮಾ.3 ರಿಂದ 7ರ ತನಕ ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾಲಯ, ಸೇಲಂ ನಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಮಟ್ಟದ ಅಂತರ್ ವಿಶ್ವ ವಿದ್ಯಾಲಯಗಳ ಹ್ಯಾಂಡ್ ಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯದ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಮಹಿಳಾ ತಂಡಕ್ಕೆ ಸುಳ್ಯದ ಭೂಮಿಕ ಆಯ್ಕೆಯಾಗಿದ್ದಾರೆ. ಸಹ್ಯಾದ್ರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿ ಸುಳ್ಯ ಕಾರ್ಯಾತೋಡಿ ಮೂಲದ ಭೂಮಿಕಾ ತಾಂತ್ರಿಕ ಪದವಿಯ 6ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾರೆ. ವೇಣುಗೋಪಾಲ್ ಕೊಲ್ಚಾರ್ ಹಾಗೂ ಹೇಮಾವತಿ ದಂಪತಿಗಳ ಪುತ್ರಿ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.