ಸುಳ್ಯ: ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಎಲ್ಲವೂ ಡಿಜಿಟಲ್ಮಯ. ಪ್ರಚಾರ, ಆರ್ಟ್ಸ್, ಪ್ಲೆಕ್ಸ್, ಬ್ಯಾನರ್ ಎಲ್ಲವೂ ಡಿಜಿಟಲ್..ಡಿಜಿಟಲ್.. ಯಾವುದೇ ಕಾರ್ಯಕ್ರಮದ ಪ್ರಚಾರಕ್ಕಾಗಿನ ಡಿಜಿಟಲ್ ಪ್ಲೆಕ್ಸ್, ಬ್ಯಾನರ್ ಸೇರಿದಂತೆ ಎಲ್ಲಾ ರೀತಿಯ ಪ್ರಚಾರ ಹಾಗು ಇತರ ವಸ್ತುಗಳನ್ನು ಸುಳ್ಯದ ಜನತೆ ಬೇಡಿಕೆಗೆ ಅನುಗುಣವಾಗಿ ದಶಕಗದಿಂದ ಪೂರೈಸುವ ಸಂಸ್ಥೆ ಸೀಮಾ ಡಿಜಿಟಲ್ ಆರ್ಟ್ಸ್ & ಪ್ಲೆಕ್ಸ್ ಪ್ರಿಂಟರ್ಸ್. ಸುಳ್ಯ ಮುಖ್ಯ ರಸ್ತೆಯ ಶ್ರೀರಾಂಪೇಟೆಯ ಕೆನರಾ ಕಾಂಪ್ಲೆಕ್ಸ್ನಲ್ಲಿರುವ ಸೀಮಾ ಆರ್ಟ್ಸ್ ತನ್ನ

ಸೀಮಾತೀತ ಸೇವೆಯ ಮೂಲಕ ಜನ ಮನ ಗೆದ್ದಿದೆ. ಅತ್ಯಂತ ವೇಗವಾಗಿ, ಗುಣಮಟ್ಟದ ಖಾತ್ರಿಯೊಂದಿಗೆ ಸ್ಪರ್ಧಾತ್ಮಕ ದರದಲ್ಲಿ ಸೇವೆ ನೀಡುವುದು ಸೀಮಾ ಆರ್ಟ್ಸ್ನ ವಿಶೇಷತೆ. ಇದೀಗ ಅತ್ಯಾಕರ್ಷಕ ಹಾಗೂ ಲೇಟೆಸ್ಟ್ ಮೋಡೆಲ್ಗಳ ಅಪೂರ್ವ ಸ್ಮರಣಿಕೆಗಳ ಸಂಗ್ರಹದೊಂದಿಗೆ ಸೀಮಾ ಮೆಮೆಂಟೋ ಗ್ಯಾಲರಿಯನ್ನು ತೆರೆಯಲಾಗಿದೆ.
ಜಯಂತ್ ರೈ ಮಾಲಕತ್ವದ ಸೀಮಾ ಆರ್ಟ್ಸ್ ಡಿಜಿಟಲ್ ಕಲಾ ಮತ್ತು ಪ್ರಿಂಟಿಂಗ್ ಕ್ಷೇತ್ರದ ಪ್ರಮುಖ ಹೆಸರು. ಇಲ್ಲಿ ಎಲ್ಲಾ ರೀತಿಯ ಡಿಜಿಟಲ್ ಬ್ಯಾನರ್ಗಳು, ಪ್ಲೆಕ್ಸ್ಗಳು, ಪೋಸ್ಟರ್ಗಳನ್ನು ಮಾಡಿ ಕೊಡಲಾಗುತ್ತದೆ. ವಿನಿಲ್ ಪ್ರಿಂಟ್, ವನ್ ವೇ ವಿಷನ್, ಲೈಟಿಂಗ್ ಬೋರ್ಡ್, ಲೆಡ್ ಸೈನ್ ಬೋರ್ಡ್, ಆಮಂತ್ರಣ ಪತ್ರಿಕೆ, ಬ್ರೋಷರ್ಸ್, ವಿಸಿಟಿಂಗ್ ಕಾರ್ಡ್, ಮೆಮೊಂಟೊ, ಟ್ರೋಫಿ, ಬ್ಯಾಡ್ಜ್, ಐಡಿ ಕಾರ್ಡ್, ನೇಮ್ ಪ್ಲೇಟ್, ನಂಬರ್ ಪ್ಲೇಟ್ ಸ್ಟಿಕ್ಕರ್ಸ್ ಹೋಗೆ ಎಲ್ಲಾ ಸೇವೆಗಳನ್ನೂ ಒಂದೇ ಸೂರಿನಡಿ ತಯಾರಿಸಿ ಕೊಡಲಾಗುತ್ತಿದೆ.

ಜಯಂತ ರೈ ಹಾಗೂ ರೂಪ ಜೆ ರೈ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸೀಮಾ ಪ್ಲೆಕ್ಸ್ ಹಾಗೂ ಬ್ಯಾನರ್ ಕ್ಷೇತ್ರದ ಸುಳ್ಯದ ಅಗ್ರಗಣ್ಯ ಸಂಸ್ಥೆ. ಗ್ರಾಹಕರ ಆಶಯದಂತೆ ಆಕರ್ಷಕವಾಗಿ ವಿನ್ಯಾಸ ಮಾಡಿ ಯಾವುದೇ ಸೈಜ್ಗಳಲ್ಲಿ ಪ್ರಿಂಟ್ ಮಾಡಿ ಪ್ರೇಮ್ ಹಾಕಿ ಸ್ಥಾಪಿಸಿ ಕೊಡಲಾಗುತ್ತದೆ. ಬ್ಯಾನರ್ನ್ನು ಆಧುನಿಕ ಪ್ರಿಂಟಿಂಗ್ ಮೆಷಿನ್ ಮೂಲಕ ಮಾಡಿ ನಿಗದಿತ ಸಮಯದಲ್ಲಿ ಪ್ರಿಂಟ್ ಮಾಡಿ ಅಳವಡಿಸಲಾಗುತ್ತದೆ. ಡಿಜಿಟಲ್, ಲೈಟಿಂಗ್ ಸೇರಿ ಎಲ್ಲಾ ತರಹದ ಬೋರ್ಡ್ಗಳನ್ನು ಮಾಡಿ ಅಳವಡಿಸಿ ಕೊಡಲಾಗುತ್ತದೆ.ಸನ್ಮಾನಕ್ಕೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿದೆ, ಹಾರ, ಶಾಲು, ಪೇಟ, ಸ್ಮರಣಿಕೆ, ಸನ್ಮಾನ ಪತ್ರ ಹೀಗೆ ಎಲ್ಲವೂ ಕೂಡ ಇಲ್ಲಿ ರಿಯಾಯಿತಿ ದರದಲ್ಲಿ ಮಾಡಿ ಕೊಡಲಾಗುತ್ತದೆ.

ಮೆಮೆಂಟೋ ಗ್ಯಾಲರಿಯಲ್ಲಿ ಯಕ್ಷಗಾನ ಮುಖವರ್ಣಿಕೆ ಸೇರಿದಂತೆ ಎಲ್ಲಾ ಮಾದರಿಯ ಮನಸ್ಸಿಗೊಪ್ಪುವ ಆಕರ್ಷಕ ಮತ್ತು ಆಧುನಿಕ ಸ್ಮರಣಿಕೆಗಳು ಲಭ್ಯವಿದೆ. ವಿವಿಧ ಗಾತ್ರದ, ಮಾದರಿಯ ಸ್ಮರಣಿಕೆಗಳು ಲಭ್ಯವಿದ್ದು ಇದನ್ನು ಗ್ರಾಹಕರಿಗೆ ಬೇಕಾದಂತೆ ಡಿಸೈನ್ ಮಾಡಿ ಕೊಡಲಾಗುತ್ತದೆ. ಅಲ್ಲದೆ ಕ್ರೀಡಾ ಕೂಟಗಳಿಗೆ ಬೇಕಾದ ದೊಡ್ಡ ಹಾಗೂ ಚಿಕ್ಕ ಟ್ರೋಫಿಗಳು, ಸ್ಮರಣಿಕೆಗಳು ಲಭ್ಯವಿದೆ. ಹೀಗೆ ಯಾವುದೇ ಕಾರ್ಯಕ್ರಮ ಪ್ರಚಾರ, ಸನ್ಮಾನ, ಸ್ಮರಣಿಕೆ ಎಲ್ಲವೂ ಒಂದೇ ಸೂರಿನಡಿ ಲಭ್ಯವಿದೆ ಎನ್ನುತ್ತಾರೆ ಜಯಂತ ರೈ. ಸಂಪರ್ಕಿಸಿ:…













