ಸುಳ್ಯ: ಶಿಸ್ತು ಮತ್ತು ಸೇವೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ಸ್ & ಗೈಡ್ಸ್ ಸಹಕಾರಿ ಎಂದು ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಹೇಳಿದ್ದಾರೆ.
ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಸ್ಕೌಟ್ಸ್ & ಗೈಡ್ಸ್ ಮತ್ತು ಕಬ್, ಬುಲ್ ಬುಲ್ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸುಳ್ಯ ಶಾಸ್ತ್ರಿ ಸರ್ಕಲ್ನಿಂದ ಸುಳ್ಯ ತಾಲೂಕಿನ ವಿವಿಧ
ಶಾಲೆಗಳ ಸುಮಾರು 450ಕ್ಕೂ ಮಿಕ್ಕಿ ಸಮವಸ್ತ್ರ ದಲ್ಲಿ ಪಾಲ್ಗೊಂಡ ವಿದ್ಯರ್ಥಿಗಳ ರ್ರ್ಯಾಲಿಗಡ ಹಸಿರು ನಿಶಾನೆ ತೋರಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಉಪ ನಿರೀಕ್ಷರಾದ ಸಂತೋಷ್ ಬಿ. ಪಿ. ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಂತರ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ ಸಭಾಂಗಣ ದಲ್ಲಿ ನಡೆದ ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ತೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು.
ಸಮಾರಂಭವನ್ನು ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾoಶುಪಾಲ ಸತೀಶ್ ಕೊಯಿoಗಾಜೆ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಗ್ರೀನ್ ವ್ಯೂ ಸಂಚಾಲಕ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ.ಮುಸ್ತಫ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು. ಕೆ, ಸುಳ್ಯ ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಸ್ಕೌಟ್ಸ್ & ಗೈಡ್ಸ್ ಅಧ್ಯಕ್ಷ ಶಶಿಧರ ಎಂ.ಜೆ, ಪದಾಧಿಕಾರಿಗಳಾದ ರಾಜು ಪಂಡಿತ್, ಮಾಧವ ಮಾಸ್ಟರ್, ಪ್ರೇಮಲತಾ ಎ. ಹೆಚ್, ಗ್ರೀನ್ ವ್ಯೂ ಶಾಲಾ ಸಂಯೋಜಕರುಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಮೊಟ್ಟೆ, ನಿರ್ದೇಶಕರಾದ ಸಾಲಿ ಕಟ್ಟೆಕ್ಕಾರ್ಸ್, ವರ್ತಕರ ಸಂಘದ ಅಧ್ಯಕ್ಷ ಕೆ. ಎಂ. ಅಬ್ದುಲ್ ಹಮೀದ್, ಮುಖ್ಯ ಶಿಕ್ಷಕ ಇಲ್ಯಾಸ್ ಕೆ ಕಾಶಿಪಟ್ಟಣ ಜನತಾ, ಮೊದಲಾದವರು ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶಶಿಧರ್ ಎಂ. ಜೆ ಸ್ವಾಗತಿಸಿ ವಿಷಯ ಪ್ರಸ್ತಾವನೆ ಮಾಡಿದರು.












