ಸುಳ್ಯ: ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ತಾಲೂಕಿನ ಶಿಕ್ಚಣ ಸಂಸ್ಥೆಗಳಿಗೆ ನಾಳೆ (ಜು.25ರಂದು) ರಜೆ ಘೋಷಿಸಲಾಗಿದೆ. ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ ಸರಕಾರಿ, ಅನುದಾನಿತ, ಮತ್ತು ಖಾಸಗೀ ವಿದ್ಯಾ ಸಂಸ್ಥೆಗಳಿಗೆ
ನಾಳೆ ರಜೆ ಘೋಷಿಸಿ ಎಂದು ತಹಶೀಲ್ದಾರ್ ಆದೇಶ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.