ಬೆಂಗಳೂರು:ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ ಸರಕಾರ ವಿನಾಯತಿ ನೀಡಿದೆ.ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 6 ವರ್ಷ ತುಂಬಿರಲೇಬೇಕು ಎನ್ನುವ ನಿಯಮ ಸಡಿಲಿಸಿ 60 ದಿನಗಳ ವಿನಾಯಿತಿ ನೀಡಲಾಗಿದೆ ಎಂದು
ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ವಿಧಾನಸಭೆ ಕಲಾಪದಲ್ಲಿ ಅವರು ಇದನ್ನು ಘೋಷಿಸಿದರು.ಈ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಪೂರೈಸಿರಬೇಕು ಎನ್ನುವ ನಿಯಮ ಇತ್ತು.ಈ ವರ್ಷ ಅದನ್ನು ಸಡಿಲಿಸಲಾಗಿದೆ.ಇದರಲ್ಲಿ 60 ದಿನಗಳ ವಿನಾಯತಿ ನೀಡಿದ್ದು 5 ವರ್ಷ 10 ತಿಂಗಳಾದರೆ ಪ್ರವೇಶ ಪಡೆಯಬಹುದು ಎಂದರು.










