ಸುಳ್ಯ: ಮಿಫ್ತಾಹುಲ್ ಉಲೂಂ ಮದರಸ ಏಣಾವರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿಧ್ಯಾರ್ಥಿಗಳ ಬಾಲ ಸಂಘಟನೆ ಎಸ್ಬಿಎಸ್ಗೆ 2023-24 ನೇ ಸಾಲಿನ ಸಮಿತಿ ಯನ್ನು ಆರಿಸಲಾಯಿತು. ಎಬಿಎಸ್ ಮುದಬ್ಬಿರ್ ಎ.ಎಂ.ಫೈಝಲ್ ಝುಹ್ರಿ ಅಲ್-ಫುರ್ಖಾನಿ ರವರ ನೇತೃತ್ವದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ
ಅಜ್ಮಲ್, ಸಾಬಿಕ್ ಹಾಗೂ ಸಫ್ವಾನ್
ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಅಜ್ಮಲ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸಾಬಿಕ್, ಕೋಶಾಧಿಕಾರಿ ಮಹಮ್ಮದ್ ಸಫ್ವಾನ್, ಜೊತೆ ಕಾರ್ಯದರ್ಶಿಯಾಗಿ ಜಾಸಿಂ, ಶಮೀಲ್ ಅವರನ್ನೂ ಆಯ್ಕೆ ಮಾಡಲಾಯಿತು. ಜೊತೆಗೆ ಮದರಸ ಮಂತ್ರಿ ಮಂಡಲ ಕೂಡ ರಚನೆ ಮಾಡಲಾಯಿತು. ಮದರಸ ಲೀಡರ್ ಆಗಿ ಶೈಮಾ, ಆರೋಗ್ಯ ಇನ್ಚಾರ್ಜ್ ಆಗಿ ಮಬಶ್ಶಿರ, ಕ್ಲೀನಿಂಗ್ ಇನ್ಚಾರ್ಜ್ ಆಗಿ ಮಾಶಿಯಾ, ಲೈಬ್ರರಿ ಹಾಗೂ ವಿಧ್ಯಾಭ್ಯಾಸ ಇನ್ಚಾರ್ಜ್ ಆಗಿ ಮುಫೀದ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅಜ್ಮಲ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಸಾಬಿಕ್ ವಂದಿಸಿದರು.