ಗೂನಡ್ಕ:ಹಯಾತುಲ್ ಇಸ್ಲಾಂ ಮದರಸ ಗೂನಡ್ಕ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿಧ್ಯಾರ್ಥಿಗಳ ಬಾಲ ಸಂಘಟನೆ ಎಸ್ಬಿಎಸ್ಗೆ 2023-24 ನೇ ಸಾಲಿನ ಸಮಿತಿ ಯನ್ನು ಆರಿಸಲಾಯಿತು. ಎಸ್ಬಿಎಸ್ ಮುದಬ್ಬಿರ್ ಹಬೀಬ್ ಹಿಮಮಿ ರವರ ನೇತೃತ್ವದಲ್ಲಿ ವಾರ್ಷಿಕ ಮಹಾಸಭೆ
ನಡೆಯಿತು.ಸಭೆಯ ಉದ್ಘಾಟನನೆಯನ್ನು ಖತೀಬರಾದ ಮುಹಮ್ಮದ್ ಅಲೀ ಸಖಾಫಿ ನೆರವೇರಿಸಿದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಉಫೈಫ್, ಉಪಾಧ್ಯಕ್ಷರಾಗಿ ಸನ್ವಾಝ್, ಪ್ರಧಾನ ಕಾರ್ಯದರ್ಶಿ ಎ.ಟಿ ಅನಸ್, ಜೊತೆ ಕಾರ್ಯದರ್ಶಿ ಇಶಾನ್ ಕೋಶಾಧಿಕಾರಿ ಮಂಸೂರ್ ಮದರಸ ಲೀಡರ್ ಆಗಿ ಮುಬಾರಕ್ ಅವರನ್ನು ಆಯ್ಕೆ ಮಾಡಲಾಯಿತು ಸಭೆಯಲ್ಲಿ ಉಫೈಫ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಎ ಟಿ ಅನಸ್ ವಂದಿಸಿದರು.