ಸುಳ್ಯ: ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯ ಮತ್ತು ಪುತ್ತೂರು ಪಾಲಿಕ್ಲಿನಿಕ್, ಪುತ್ತೂರು ಇವರಿಂದ ನಿರ್ವಹಣೆ ಮಾಡುವ ಮಲ್ಪಿಸ್ಪೆಷಾಲಿಟಿ ಸ್ಯಾಟ್ ಲೈಟ್ ಡೆಂಟಲ್ ಕ್ಲಿನಿಕ್ನ್ನು ಪುತ್ತೂರು ರೋಟರಿ ಸಹಕಾರದಲ್ಲಿ ಪುತ್ತೂರು ಮಹಾವೀರ ಸೆಂಟರ್ನಲ್ಲಿ ಎ.ಒ.ಎಲ್.ಇ.’ಕಮಿಟಿ ಬಿ’ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ. ವಹಿಸಿದ್ದರು. ಮುಖ್ಯ ಅತಿಥಿಗಳಾದ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ಡಾ. ಸುರೇಶ್ ಪುತ್ತೂರಾಯ, ಬಾಲಕೃಷ್ಣ ಪೈ, ಉಮಾನಾಥ್ ಪಿ.ಬಿ. ಭಾಗವಹಿಸಿದರು.ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್, ಮಹಾವೀರ ಮೆಡಿಕಲ್ ಸೆಂಟರ್ನ ಮಾಲಕರಾದ ಡಾ.ಅಶೋಕ ಪಡಿವಾಳ್, ಡಾ.ರಾಜೇಶ್ವರಿ ಪಡಿವಾಳ್, ಅಜಯ್ ಪಡಿವಾಳ್, ಪುತ್ತೂರು ರೋಟರಿ ಕ್ಲಬ್ನ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ, ಎ.ಒ.ಎಲ್.ಇ.’ಕಮಿಟಿ ಬಿ’ ನಿರ್ದೇಶಕಿ
ಡಾ. ಅಭಿಜ್ಞಾ ಕೆ.ಆರ್. ನಿರ್ದೇಶಕರು, ರೋಟರಿ ಕ್ಲಬ್ ಉಪಾಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿಭಾಗ ಮುಖ್ಯಸ್ಥರುಗಳಾದ ಡಾ. ನುಸ್ರತ್ ಫರೀದ್, ಡಾ. ದಯಾಕರ್ ಎಂ.ಎಂ., ಡಾ. ಮನೋಜ್ ಕುಮಾರ್ ಎ.ಡಿ., ಡಾ. ರೇವಂತ್ ಯಸ್. ಡಾ. ಹೇಮಂತ್ ಬಟ್ಟೂರು, ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ., ಎ.ಒ.ಎಲ್.ಇ., ಕಮಿಟಿ ‘ಬಿ’ ಇದರ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ, ಪ್ರಸನ್ನ ಕಲ್ಲಾಜೆ, ಪಿ.ಆರ್.ಒ. ಜಯಂತ ತಳೂರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.












