ಸುಳ್ಯ: ರಾಜ್ಯದಲ್ಲಿ ಬಿಜೆಪಿಯ ಸಂಘಟನಾ ಚಟುವಟಿಕೆಗಳಿಗೆ ವೇಗ ನೀಡಲಾಗುತ್ತಿದ್ದು ಈ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.ದ.ಕ.ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿದ ಬಳಿಕ
ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಅವರು ‘ಸುಳ್ಯ ಮಿರರ್’ ಜೊತೆ ಮಾತನಾಡಿದರು. ಗ್ರಾಮ ಚಲೋ, ಶಕ್ತಿ ವಂದನಾ ಕಾರ್ಯಕ್ರಮ, ಗೋಡೆ ಬರಹ ಕಾರ್ಯಕ್ರಮ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅನುಷ್ಠಾನ ಸಂಬಂಧಿಸಿ ಚರ್ಚಿಸಲು ಪ್ರತಿ ಮಂಡಲಕ್ಕೆ ಭೇಟಿ ನೀಡಿ ಪಕ್ಷದ ಪ್ರಮುಖರು ಹಾಗೂ ಕೋರ್ ಕಮಿಟಿ ಜೊತೆ ಚರ್ಚೆ ನಡೆಸಲಾಗುತಿದೆ. ಈ ಹಿನ್ನಲೆಯಲ್ಲಿ ಸುಳ್ಯಕ್ಕೂ ಇಂದು ಭೇಟಿ ನೀಡಿ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಲೋಕಸಭಾ ಚುನಾವಣಾ ಸಿದ್ಧತೆ ಆರಂಭಗೊಂಡಿದೆ. ರಾಜ್ಯದಲ್ಲಿ 8 ಕ್ಲಸ್ಟರ್ ಮಾಡಲಾಗಿದೆ. ನಮ್ಮ ಕ್ಲಸ್ಟರ್ಗೂ ಪ್ರಧಾನಿ, ಗೃಹ ಸಚಿವರು ಬರುವ ಕಾರ್ಯಕ್ರಮ ಇದೆ. ಬೂತ್ ಮಟ್ಟದಿಂದ ಸಿದ್ಧತೆಗಳು ನಡೆಯುತಿದೆ ಎಂದು ಅವರು ಹೇಳಿದರು.







