ಸುಳ್ಯ:ಸುಳ್ಯ ನಗರ ಪಂಚಾಯತ್ನ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಶಶಿಕಲಾ ಶಂಕರ ಮಯ್ಯ ಅವರು ನ.29ರಂದು ನಿವೃತ್ತರಾದರು.ಅವರಿಗೆ ನ.ಪಂ.ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಮುಖ್ಯಾಧಿಕಾರಿ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ. ಮಾಜಿ
ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಶಶಿಕಲಾ ನೀರಬಿದಿರೆ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ, ಮಾಜಿ ಸದಸ್ಯರಾದ ಡೇವಿಡ್ ಧೀರ ಕ್ರಾಸ್ತ, ಕೆ.ಎಸ್.ಉಮ್ಮರ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸಿಬ್ಬಂದಿ ಸುದೇವ ಜಯನಗರ, ದಿಲೀಪ್ ಮಾತನಾಡಿ ಶಶಿಕಲಾರಿಗೆ ಶುಭಹಾರೈಸಿದರು. ಶಶಿಕಲಾ ಶಂಕರ ಮಯ್ಯ ಕೃತಜ್ಞತೆ ಸಲ್ಲಿಸಿದರು. ದಿಲೀಪ್ ಕೊಡಿಯಾಲಬೈಲ್ ಕಾರ್ಯಕ್ರಮ ನಿರೂಪಿಸಿದರು. ನ.ಪಂ.ನ ಎಲ್ಲ ಸಿಬ್ಬಂದಿಗಳು, ಸದಸ್ಯರುಗಳು ಶಶಿಕಲಾಮಯ್ಯರನ್ನು ಗೌರವಿಸಿ ಸತ್ಕರಿಸಿ ನಿವೃತ್ತ ಜೀವನಕ್ಕೆ ಶುಭಕೋರಿದರು.













