ಸುಳ್ಯ:ಸುಳ್ಯ ನಗರ ಪಂಚಾಯತ್ನಲ್ಲಿ 37 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದ್ವಿತೀಯ ದರ್ಜೆ ಸಹಾಯಕರಾಗಿ ನಿವೃತ್ತರಾದ ಶಶಿಕಲಾ ಶಂಕರ ಮಯ್ಯ ಅವರಿಗೆ ಸಾರ್ವಜನಿಕ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಂಗಣದಲ್ಲಿ ಡಿ.7ರಂದು ನಡೆಯಿತು.ಶಶಿಕಲಾ ಶಂಕರ ಮಯ್ಯ ಅಭಿನಂದನಾ ಬಳಗದ ವತಿಯಿಂದ ನಡೆದ ಸಮಾರಂಭವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉದ್ಘಾಟಿಸಿ,
ಶುಭ ಹಾರೈಸಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿದರೆ ಅಧ್ಯಕ್ಷತೆ ವಹಿಸಿದ್ದರು.ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ
ಎನ್.ಎ.ರಾಮಚಂದ್ರ, ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ನ ಹಿಂದಿನ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಹಿರಿಯರಾದ ಕೃಷ್ಣ ನಾವಡ,ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್,ಮೊಗರ್ಪಣೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕೆ.ಎಂ,ಎಸ್, ಸಿಸ್ಟರ್ ಮೇರಿ ಸ್ಟೆಲ್ಲಾ, ಶಶಿಕಲಾ ಶಂಕರ ಮಯ್ಯ ಅವರ ಪುತ್ರ ಕವನ್, ಪುತ್ರಿ ಕಾವ್ಯ, ಅಳಿಯ ಮುರಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಎನ್.ಜಯಪ್ರಕಾಶ್ ರೈ, ಮಧುಸೂದನ ಕುಂಭಕ್ಕೋಡು, ಲತಾ ಮಧುಸೂಧನ, ಬಾಲಗೋಪಾಲ ಸೇರ್ಕಜೆ, ಕೆ.ಎಸ್.ಉಮ್ಮರ್, ಸುಧಾಕರ ಕೇರ್ಪಳ, ಶೀಲಾ ಅರುಣ ಕುರುಂಜಿ, ಸುಶೀಲಾ ಜಿನ್ನಪ್ಪ, ಆದಂ ಹಾಜಿ ಕಮ್ಮಾಡಿ, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ, ಶರೀಫ್ ಕಂಠಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ನ.ಪಂ.ಮಾಜಿ ಮುಖ್ಯಾಧಿಕಾರಿ ಚಂದ್ರಕುಮಾರ್. ಶಶಿಕಲಾ ಶಂಕರ ಮಯ್ಯ ಅವರು ಅಭಿನಂದನೆ ಹಾಗೂ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಕಾರ್ಯಕ್ರಮ ನಿರೂಪಿಸಿದರು.





