ಸುಳ್ಯ:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸಹಕಾರದಲ್ಲಿ ಮಾ.1ರಿಂದ ಕರೆ ನೀಡಿರುವ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಪೂರ್ವಭಾವಿಯಾಗಿ ಸರಕಾರಿ ನೌಕರರ ತಾಲೂಕು ಸಂಘ ಹಾಗು ವಿವಿಧ ಸಂಘಗಳ ಪೂರ್ವಭಾವಿ ಸಭೆ ಸುಳ್ಯದಲ್ಲಿ ನಡೆಯಿತು. ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸರಕಾರಿ ನೌಕರರು ಮಾ.1 ರಿಂದ

ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಠಾವಧಿ ಮುಷ್ಕರ ನಡೆಸಲು ನೌಕರರ ಸಂಘ ಕರೆ ನೀಡಿದೆ.7ನೇ ವೇತನ ಆಯೋಗದಂತೆ ವೇತನ ಹೆಚ್ಚಳ ಸೌಲಭ್ಯ ಹೊರಡಿಸಬೇಕು. ಹೊಸ ಪಿಂಚಣಿ ಬದಲಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್ ಮುಷ್ಕರದ ಬಗ್ಗೆ ವಿವರಿಸಿದರು. ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ, ಕೋಶಾಧಿಕಾರಿ ಮಹಾದೇವ, ಪದಾಧಿಕಾರಿಗಳಾದ ಚಂದ್ರಕಾಂತ್ ಎಂ.ಆರ್., ಸಿಂಗಾರ ಶೆಟ್ಟಿ, ಮುದ್ದುಕೃಷ್ಣ, ಸನತ್ ಎಸ್.ಪಿ., ರವಿಂದ್ರ ಮಡ್ತಿಲ, ವಿಜಯ ವಾರ್ಡನ್, ನೇಮಿಚಂದ್ರ, ಬಸವರಾಜ ಚಕ್ರದ, ಯೋಗೀಶ್, ನಟರಾಜ ಎಂ.ಎಸ್., ಪ್ರಮೋದ್ ಅಬಕಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಕಜೆಮೂಲೆ, ಶೀಲಾವತಿ, ಸರೋಜಿನಿ, ಕುಶಾಲಪ್ಪ ತುಂಬತ್ತಾಜೆ, ಕುಶಾಲಪ್ಪ ಪಾರೆಪ್ಪಾಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ, ನಾರಾಯಣ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಕಾಶ ಮೂಡಿತ್ತಾಯ, ಬೋಧಕೇತರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ರಸಾದ್ ಜಿ.ಎಸ್., ಕಾರ್ಯದರ್ಶಿ ಶಿವಪ್ರಸಾದ್ ಕಡವೆಪಳ್ಳ, ಎನ್.ಪಿ.ಎಸ್. ಸಂಘದ ಅಧ್ಯಕ್ಷ ಚಂದ್ರಶೇಖರ, ಯೋಗೀಶ ಭರತ್, ಪಿಡಿಒ ಸಂಘದ ಅಧ್ಯಕ್ಷ ರವಿಚಂದ್ರ, ಪದವೀಧರೇತರ ಶಿಕ್ಷಕರ ಸಂಘದ ಅರ್ಧಯಕ್ಷ ತಿಮ್ಮ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೂಫಿ ಪೆರಾಜೆ, ಸರ್ವೇ ಇಲಾಖೆಯ ಜಗದೀಶ್, ಪದವೀಧರೇತರ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ, ಗೋಪಾಲಕೃಷ್ಣ ಬನ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಚವೀರಪ್ಪ ಮೊದಲಾದವರಿದ್ದರು.