ಸುಳ್ಯ:ಸುಳ್ಯದ ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಗೌಡ ವಿದ್ಯಾಸಂಘ ದ ನಿರ್ದೇಶಕರಾದ
ಡಿ.ಎಂ.ಗೌಡ ವಿದ್ಯಾರ್ಥಿನಿಯರನ್ನು ಪುರಸ್ಕರಿಸಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎರಡು ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ದಿವೀಶ್ ಕುಮಾರ್ ಮತ್ತು ನಾರಾಯಣ ಜಟ್ಟಿಪಳ್ಳ ಉಪಸ್ಥಿತರಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಗಾಯತ್ರಿ, ಪ್ರಭಾವತಿ, ಕೃತಿ. ಪಿ. ಎಸ್ ಮತ್ತು ಬಾಲಚಂದ್ರ ಅವರು ನಿರ್ವಹಿಸಿದರು. ಪ್ರಾಂಶುಪಾಲರಾದ ದಯಾಮಣಿ ಕೆ.ಸ್ವಾಗತಿಸಿ. ಮುಖ್ಯೋಪಾಧ್ಯಾಯಿನಿ ಭಾರತಿ. ಪಿ. ವಂದಿಸಿದರು. ಅರ್ಪಣಾ. ಜಿ.ಕೆ ರವರು ಕಾರ್ಯಕ್ರಮ ನಿರೂಪಿಸಿದರು.