ಸುಳ್ಯ: ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಸುಳ್ಯದ ಕಾನತ್ತಿಲ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ ಗೋಕುಲ್ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. 51ನೇ ವರ್ಷದ ಜಮಾ ಖರ್ಚಿನ ಪಟ್ಟಿಯನ್ನು ಸಮಿತಿಯ ಖಜಾಂಜಿ ಪ್ರದೀಪ್ ಕೆ ಎನ್ ಇವರು ಮಂಡಿಸಿ ಅನುಮೋದನೆ
ಮಾಡಲಾಯಿತು. ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ ಕಾರ್ಯಕ್ರಮ ಯಶಸ್ವಿಯಾಗಿ ನಡೆದಬಗ್ಗೆ ವಿವರಣೆ ನೀಡಿ ಅಭಿನಂದನೆ ಸಲ್ಲಿಸಿದರು. ದಸರಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ ಮೆರವಣಿಗೆ ಮತ್ತು ಸ್ತಬ್ದ ಚಿತ್ರಕ್ಕೆ ಸಹಕರಿಸಿದ ಸಂಘಸಂಸ್ಥೆಗಳಿಗೆ ಮತ್ತು ವಿವಿಧ ಇಲಾಖೆಗಳ ಸಹಯೋಗದಿಂದ ಯಶಸ್ವಿಯಾಗಿ ನಡೆದು ಊರ ಮತ್ತು ಪರವೂರ ಜನರ ಮೆಚ್ಚುಗೆ ಪಡೆದು ಜನರ ಉತ್ಸವ ಮೆರುಗನ್ನು ನೀಡಿದ ಬಗ್ಗೆ ವಿವರಣೆ ನೀಡಿದರು.
ಸಮಿತಿಯ ಗೌರವಾಧ್ಯಕ್ಷ ಕೆ ಗೋಕುಲ್ದಾಸ್ ಮಾತನಾಡಿ ಯುವಜನರ ಸಂಘಟನೆ ಮತ್ತು ಧಾರ್ಮಿಕ ಉತ್ಸವವನ್ನು ಸುಳ್ಯದ ನಗರದ ಯುವಕರ ಮುಂದಾಳತ್ವದಲ್ಲಿ ನಡೆಸಿಕೊಂಡು ಇರುವುದರಿಂದ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಸಂಘಟನಾ ಶಕ್ತಿ ಹೆಚ್ಚಾಗುಗತ್ತದೆ. ಅಲ್ಲದೆ 52ನೇ ವರ್ಷದ 9ದಿನಗಳ ಆಚರಣೆ ಬಗ್ಗೆ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ನೂತನ ಖಜಾಂಚಿಯಾಗಿ ಪುರುಷೋತ್ತಮ ಕಾಯರ್ತೋಡಿ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು ಧನ್ಯವಾದ ನೀಡಿದರು.
ಸಭೆಯಲ್ಲಿ ದಸರಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರದಾನ ಕಾರ್ಯದರ್ಶಿ ಎಂ ಕೆ ಸತೀಶ್, ಸಮಿತಿಯ ಉಪಾಧ್ಯಕ್ಷ ಕೃಷ್ಣ ಬೆಟ್ಟ, ನಿರ್ದೇಶಕರಾದ ರಾಜು ಪಂಡಿತ್, ದೀಪಕ್ ವಿಷ್ಣುಸರ್ಕಲ್, ರಾಜೇಶ್ ಕುರುಂಜಿಗುಡ್ಡೆ, ಮಂಜುನಾಥ್ ಬಳ್ಳಾರಿ, ಪ್ರಮುಖರಾದ ಶಶಿಧರ್ ಎಂ ಜೆ, ಭವಾನಿಶಂಕರ್ ಕಲ್ಮಡ್ಕ, ಮಧುಸೂಧನ್ ಬೂಡು, ಚಂದ್ರಶೇಖರ ಪಂಡಿತ್, ಜನಾರ್ದನ ದೋಳ, ಪದ್ಮನಾಭ ಆರ್ಭಡ್ಕ, ಗಣೇಶ್ ಬೆಟ್ಟಂಪಾಡಿ, ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.









