ಸುಳ್ಯ:ಸುಳ್ಯದ ಜನಪ್ರಿಯ ಹೋಟೆಲ್ ಸಂತೃಪ್ತಿಯಲ್ಲಿ ಓಣಂ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಓಣಂ ಸದ್ಯ ಕಾರ್ಯಕ್ರಮ ಈ ಬಾರಿಯೂ ಜನ ಮನ ಸೆಳೆದು ‘ಬಿಗ್ ಹಿಟ್’ ಆಗಿದೆ. ಎರಡು ದಿನ ಹೋಟೆಲ್ನಲ್ಲಿ ಹಮ್ಮಿಕೊಂಡ ಓಣಂ ಸದ್ಯ ಪ್ರತಿ ದಿನ ನರಾರು ಮಂದಿ ಸವಿದರು. ಎರಡು ದಿನವೂ ಹೋಟೆಲ್ನಲ್ಲಿ ಭಾರೀ ರಶ್ ಕಂಡು ಬಂದಿತ್ತು.
ಕಳೆದ ಒಂದು ದಶಕದಿಂದ ಸುಳ್ಯದ ಜನತೆಗೆ ಸ್ವಾದಿಷ್ಟ ಮತ್ತು ವರೈಟಿ ಖಾದ್ಯಗಳನ್ನು
ಉಣಬಡಿಸಿ ಗ್ರಾಹಕರಿಗೆ ತೃಪ್ತಿ ನೀಡುತ್ತಿರುವ ಸುಳ್ಯ ಹಳೆಗೇಟಿನ ಹೋಟೆಲ್ ಸಂತೃಪ್ತಿಯಲ್ಲಿ ಓಣಂ ಸಂದರ್ಭದಲ್ಲಿ ವಿಶೇಷವಾಗಿ ಓಣಂ ಸದ್ಯ ಉಣ ಬಡಿಸುತ್ತಾರೆ. ದೇಶದೆಲ್ಲೆಡೆ ಆಚರಿಸುವ ಸಡಗರದ ಓಣಂ ಹಬ್ಬದ ಸಂಭ್ರಮಕ್ಕೆ ಓಣಂ ಸದ್ಯ ಬಡಿಸುವ ಮೂಲಕ ಒಂದು ದಶಕದಿಂದ ಸಂತೃಪ್ತಿ ಹೋಟೆಲ್ ಸಾಥ್ ನೀಡುತಿದೆ. ಓಣಂ ಪ್ರಯುಕ್ತ ಎರಡು ದಿನಗಳ ಕಾಲ ಸಂತೃಪ್ತಿಯಲ್ಲಿ ಓಣಂ ಸದ್ಯ ರಸದೌತಣ ಉಣ ಬಡಿಸಲಾಯಿತು. ಪ್ರತಿ ದಿನವೂ ನೂರಾರು ಮಂದಿ ಸದ್ಯ ಸವಿದರು. ಸುಮಾರು 35ಕ್ಕೂ ಅಧಿಕ ವೈವಿಧ್ಯಮಯ ಖಾದ್ಯ ಬಡಿಸಿದು.ಕೇರಳದ ಓಣಂ ಹಬ್ಬಕ್ಕೆ ಬಡಿಸಲಾಗುವ ಎಲ್ಲಾ ಖಾದ್ಯಗಳನ್ನೂ ಬಡಿಸಲಾಯಿತು.ಅನ್ನ, ಸಾಂಬಾರ್, ಪಾಯಸ, ಅವಿಯಲ್, ಕೂಟುಕರಿ, ಪುಳಿಶ್ಯೇರಿ, ಪಲ್ಯಗಳು, ಹಪ್ಪಳ, ಬಾಳೆ ಹಣ್ಣು, ಶರ್ಕರ ವರಟ್ಟಿ, ಚಿಪ್ಸ್, ಹೋಳಿಗೆ ಹೀಗೆ ಓಣಂ ಸದ್ಯದಲ್ಲಿ ಎಲ್ಲಾ ಖಾದ್ಯಗಳನ್ನೂ ಬಡಿಸಲಾಗುತ್ತದೆ. ಬಾಳೆ ಎಲೆ ಹಾಕಿ ಸಾಂಪ್ರದಾಯಿಕವಾಗಿ ಸದ್ಯ ಬಡಿಸಲಾಯಿತು.
ನವೀನ್.
ಓಣಂ ಸದ್ಯ ತಯಾರಿಸಲು ವಿಶೇಷ ಪಾಕತಜ್ಞರನ್ನು ಕರೆ ತರಲಾಗಿತ್ತು. ಓಣಂ ಸದ್ಯಕ್ಕೆ ಜನರಿಂದ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸಂತೃಪ್ತಿ ಹೋಟೆಲ್ನ ಮಾಲಕರಾದ ನವೀನ್ ಹೇಳುತ್ತಾರೆ. ಓಣಂ ಆಚರಿಸುವ ಮಂದಿ ಮಾತ್ರವಲ್ಲದೆ ಸುಳ್ಯದ ಬಹುತೇಕ ಮಂದಿ ಓಣಂ ಸದ್ಯ ಉಣ್ಣಲು ಆಗಮಿಸಿದ್ದರು. ಸುಳ್ಯ ಮಾತ್ರವಲ್ಲದೆ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಓಣಂ ಸದ್ಯ ಸವಿಯಲು ಬಂದಿದ್ದರು.
ಈ ಬಾರಿಯೂ ವಿಶೇಷ ಓಣಂ ಸದ್ಯದೊಂದಿಗೆ ಸಂತೃಪ್ತಿ ಓಣಂ ಸಂಭ್ರಮವನ್ನು ನಾಡಿಗೆ ಪಸರಿಸಿದೆ. ಹಲವು ಮಂದಿ ಪಾರ್ಸೆಲ್ ಮೂಲಕ ಓಣಂ ಸದ್ಯ ಮನೆಗೆ ಕೊಂಡೊಯ್ದು ಸವಿದರು. ಒಟ್ಟಿನಲ್ಲಿ ಓಣಂ ಸದ್ಯ ಕಾರ್ಯಕ್ರಮ ಈ ಬಾರಿಯೂ ಯಶಸ್ವಿಯಾಗಿದ್ದು ಜನರು ಸಂತೃಪ್ತ ಭಾವದಿಂದ ಮರಳಿದ ತೃಪ್ತಿ ಇದೆ ಎನ್ನುತ್ತಾರೆ ನವೀನ್.