ಸುಳ್ಯ:ಪೇರಾಲಿನ ಸಯ್ಯದ್ ಆಟ್ಟು ಉಪ್ಪಾಪ ಸ್ವಲಾತ್ ಸಂಕೇಶ್ ಮಜ್ಲಿಸ್ ಇದರ ವತಿಯಿಂದ ಫೆಬ್ರವರಿ 19 ರಂದು ಆದೂರು ಸಯ್ಯದ್ ಆಟ್ಟು ಉಪ್ಪಾಪ ತಂಙಳ್ ಅವರ ಹೆಸರಿನಲ್ಲಿ ಸಯ್ಯದ್ ಆಟ್ಟು ಉಪ್ಪಾಪ ಅಂಡ್ ನೇರ್ಚೆ ಹಾಗೂ ಏಕದಿನ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಅಜ್ಜಾವರ ಗ್ರಾಮದ ಸಂಕೇಶ್ ಪೇರಾಲಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಓರ್ವರಾದ ವಕೀಲ ಮೂಸಾ ಕುಂಞಿ ಪೈಂಬೆಚ್ಚಾಲು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎಂಟು ವರ್ಷಗಳಿಂದ
ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದು ಬಂದಿರುವ ಸಂಕೇಶ್ ಮಜ್ಲೀಸ್ ಇಂದು ಸಾವಿರಾರು ಮಂದಿಗೆ ಆಶಾ ಕೇಂದ್ರವಾಗಿ ಬೆಳೆದು ನಿಂತ್ತಿದೆ. ಕಾಸರಗೋಡು ಜಿಲ್ಲೆಯ ಸಯ್ಯಿದ್ ಆದೂರು ಆಟ್ಟು ತಂಙಳ್ ಅವರ ಹೆಸರಿನಲ್ಲಿ ನಡೆಸುವ ಪ್ರಾರ್ಥನಾ ಮಜ್ಲೀಸ್ ಇಂದು ಹಲವರ ಕಷ್ಟಕಾರ್ಪಣ್ಯಗಳ ಪರಿಹಾರ ಕೇಂದ್ರವಾಗಿದೆ.ಇದರ ನೇತೃತ್ವವನ್ನು ಅಬ್ದುಲ್ ಕುಂಞಿ ಸಂಕೇಶ್ ಅವರು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಆಂಡ್ ನೇರ್ಚೆ ಮತ್ತು ಏಕ ದಿನ ಧಾರ್ಮಿಕ ಉಪನ್ಯಾಸದ ಕಾರ್ಯಕ್ರಮದ

ಅಧ್ಯಕ್ಷತೆಯನ್ನು ಮಜ್ಲೀಸ್ನ ಸ್ಥಾಪಕ ಅಧ್ಯಕ್ಷ ಅಬ್ದುಲ್ ಕುಂಞಿ ಸಂಕೇಶ್ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಕೇರಳದ ಸುಪ್ರಸಿದ್ಧ ಖ್ಯಾತವಾಗ್ಮಿ ಆಬಿದ್ ಹುದವಿ ತಚ್ಚನ್ನ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಫಾರೂಖ್ ಸಅದಿ ತಿಂಗಳಾಡಿ, ಮೊಯಿದಿನ್ ಕುಟ್ಟಿ ಅಶ್ರಫಿ ಕೇರಳ,ಅಬ್ದುಲ್ ಅಝೀಝ್ ಸಖಾಫಿ ಮಾವೂರು ಕೇರಳ, ಇಸ್ಮಾಯಿಲ್ ಮುಸ್ಲಿಯಾರ್ ಕೇರಳ, ನಸೀರ್ ಮುಸ್ಲಿಯಾರ್ ಕೇರಳ ಮುಂತಾದ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜಕೀಯ ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ,
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ವಕೀಲರಾದ
ಸುಕುಮಾರ್ ಕೋಡ್ತುಗುಳಿ, ಕಾಂಗ್ರೆಸ್ ಸುಳ್ಯ ವಿಧಾನಸಭಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಉದ್ಯಮಿ ಆದಂ ಹಾಜಿ ಕಮ್ಮಾಡಿ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಬಾಳಿಲ, ನ.ಪಂ.ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ಅರಂಬೂರು, ಕೆಪೆಕ್ ಮಾಜಿ ನಿರ್ದೇಶ ಪಿ.ಎ.ಮಹಮ್ಮದ್, ಹಿರಿಯರಾದ ಹಾಜಿ ಇಬ್ರಾಹಿಂ ಸಂಕೇಶ್ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು,ಕಾಸರಗೋಡು ಬೆಂಗಳೂರು,ಕೇರಳ ಮಲಪುರಂ ಜಿಲ್ಲೆಗಳಿಂದಲೂ ಜಾತಿ ಮತ ಬೇದ ಭಾವವಿಲ್ಲದೆ ನೂರಾರು ಮಂದಿ ವಿಶ್ವಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಇರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಕೇಶ್ ಮಜ್ಲೀಸ್ ಸ್ಥಾಪಕ ಅಧ್ಯಕ್ಷ ಅಬ್ದುಲ್ ಕುಂಞಿ ಸಂಕೇಶ್,ಹಾಜಿ ಅಬ್ದುಲ್ಲಾ ಜಯನಗರ ಉಪಸ್ಥಿತರಿದ್ದರು.









