ಸಾಂಗ್ಲಿ:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗು ಕನ್ನಡ ಸಂಸ್ಕ್ತ್ರತಿ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ’ ಶೀರ್ಷಿಕೆಯಡಿ ನಡೆಯುವ ಕರ್ನಾಟಕ ಸುವರ್ಣ ಸಂಭ್ರಮ-50 ಕಾರ್ಯಕ್ರಮದಲ್ಲಿ
ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ನೆರವೇರಿಸಿದರು. ಸ್ಥಳೀಯ ಶಾಸಕರಾದ ವಿಕ್ರಮ ಸಿಂಹ ಬಾಳಾ ಸಾಹೆಬ್ ಸಾವಂತ್, ಕರ್ನಾಟಕ ಗಡಿ ಪ್ರದೇಶ
ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಸಂಗಮೆಶ ಬಬಲೇಶ್ವರ , ಕನ್ನಡ ಸಂಸ್ಕ್ರತಿ ಇಲಾಖೆ ನಿರ್ದೇಶಕರಾದ ಧರಣೀದೇವಿ ಮಾಲಗತ್ತಿ ಹಾಗು ಪ್ರಾಧಿಕಾರದ ಹಾಗು ಅಕಾಡೆಮಿ ಅಧ್ಯಕ್ಷರುಗಳು ಈ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಅರೆಭಾಷೆ ಅಕಾಡೆಮಿ ಹಾಗೂ ಇತರ ಅಕಡೆಮಿಗಳ ನೇತೃತ್ವದಲ್ಲಿ ನಡೆದ ‘ಹೊನ್ನ ಬಿತ್ತೇವು’ ಎಂಬ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ ಹಾಗು ಇನ್ನಿತರ ಕಲಾವಿದರು ಭಾಗವಹಿಸಿದ್ದರು.