ಸುಳ್ಯ: ಫೆ 15 ರಿಂದ 18 ರತನಕ ನಡೆಯುವ ಮುಹಿಮ್ಮಾತ್ ಸನದುದಾನ ಮಹಾ ಸಮ್ಮೇಳನ ಮತ್ತು ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 18 ನೇ ಉರೂಸ್ ಮುಬಾರಕ್ ಪ್ರಚಾರಾರ್ಥ ಸುಳ್ಯ ತಾಲೂಕು ಮುಹಿಮ್ಮಾತ್ ಅಲುಮ್ನಿ ಇದರ ಅಡಿಯಲ್ಲಿ ಸಂದೇಶ ಯಾತ್ರೆ ಕಲ್ಲುಗುಂಡಿಯಲ್ಲಿ
ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ವೈ ಎಸ್ ಎಸ್ ಎಸ್ ಎಫ್ ಸ್ಥಳೀಯ ನಾಯಕರ ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಎಸ್ ಎಂ ಎ ರೀಜನಲ್ ಅಧ್ಯಕ್ಷರಾದ ಹಮೀದ್ ಬೀಜ ಕೊಚ್ಚಿ ಧ್ವಜವನ್ನು ಯಾತ್ರಾ ನಾಯಕರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಯಾತ್ರೆಯು ಕಲ್ಲುಗುಂಡಿ, ಸುಳ್ಯ ,ಮಂಡೆಕೋಲು, ಜಾಲ್ಸೂರು,ಎಲಿಮಲೆ,ಬೆಳ್ಳಾರೆ, ನಿಂತಿಕಲ್ಲು ಮಾರ್ಗವಾಗಿ ಎರಡು ದಿನಗಳಲ್ಲಿ ಹಾದು ಹೋಗಲಿದೆ.