ಸುಳ್ಯ:ಸುಳ್ಯದ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಅ.10 ರಿಂದ ಡಿ.23 ರ ವರೆಗೆ ನಡೆಯಲಿದೆ ಎಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಳ್ಳತ್ತಡ್ಕ ತಿಳಿಸಿದ್ದಾರೆ. ಸುಳ್ಯ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅವರು ಯುವಜನ ಸಂಯುಕ್ತ ಮಂಡಳಿಯಲ್ಲಿ ನೋಂದಾವಣೆಯಾದ ಸುಳ್ಯ ತಾಲೂಕಿನ ಎಲ್ಲಾ
ಯುವಕ ಯುವತಿ ಮಂಡಳಿಗಳಿಗೆ 75 ದಿನಗಳ ಸ್ವಚ್ಛತಾ ಕಾರ್ಯಕ್ರಮ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನವಾಗಿ ಯುವಕ ಮಂಡಲಕ್ಕೆ 10 ಸಾವಿರ, ಯುವತಿ ಮಂಡಲಕ್ಕೆ 5 ಸಾವಿರ ಹಾಗೂ ಫಲಕ,ಪ್ರಶಸ್ತಿ ಪತ್ರ ಹಾಗೂ 7ಕ್ಕೂ ಹೆಚ್ಚು ಕಾರ್ಯಕ್ರಮ ಮಾಡುವ ತಂಡಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಈಗಾಗಲೇ ಮಂಡಳಿಯಲ್ಲಿ ನೋಂದಣಿಗಿಗೊಂಡ 80 ಯುವಕ ಮತ್ತು ಯುವತಿ ಮಂಡಲಗಳ ಪೈಕಿ 35 ತಂಡಗಳು ಪಂಚ ಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ನೋಂದಣಿ ಮಾಡಲಾಗಿದ್ದು ಇನ್ನಷ್ಟು ಸಂಘಗಳು ನೋಂದಣಿ ಮಾಡಬಹುದು ಎಂದು ಹೇಳಿದರು.
ಕಾರ್ಯದರ್ಶಿ ಮುರಳಿ ನಳಿಯಾರು ಮಾತನಾಡಿ ಪಂಚ ಸಪ್ತತಿ ಎಂಬ ವಿನೂತನ ಕಾರ್ಯಕ್ರಮವು ನಿರಂತರವಾಗಿ 75 ದಿನಗಳ ಕಾಲ ನಡೆಯಲಿದ್ದು ಅವರಿಗೆ ಸಂಯುಕ್ತ ಮಂಡಳಿ ವತಿಯಿಂದ ಬ್ಯಾನರ್ ನೀಡಲಾಗುತ್ತದೆ ಜೊತೆಗೆ ಅವರು ಕನಿಷ್ಠ 75 ದಿನಗಳ ಒಳಗೆ 7 ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಅವರ ಕಾರ್ಯಗಳ ಕುರಿತ ದಾಖಲೆಗಳನ್ನು ಡಿಸೆಂಬರ್ 30 ರ ಒಳಗೆ ಸಲ್ಲಿಸಬೇಕು. ಸ್ವಚ್ಛತೆ ಮಾಡುವುದರ ಜೊತಗೆ ಸಮಾಜದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಯುವಜನ ಸಂಯುಕ್ತ ಮಂಡಳಿಯ ಕೋಶಾಧಿಕಾರಿ ಲೋಹಿತ್ ಬಾಳಿಕಳ, ಸಾಂಸ್ಕೃತಿಕ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಉಪಾಧ್ಯಕ್ಷ, ದಯಾನಂದ ಪಾತಿಕಲ್ಲು, ಜೊತೆ ಕಾರ್ಯದರ್ಶಿ ನಿತೀಶ್ ಎರ್ಮೆಟ್ಟಿ, ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನಿರ್ದೇಶಕರಾದ ಗುರುರಾಜ್ ಅಜ್ಜಾವರ,ವಿನಯ ಬೆದ್ರುಪಣೆ, ಪ್ರಸಾದ್ ಕಾಟೂರು,ಸಂಜಯ್ ನೆಟ್ಟಾರು,ಶಿವಪ್ರಸಾದ್ ಕೇರ್ಪಳ ಉಪಸ್ಥಿತರಿದ್ದರು.












