ಸುಳ್ಯ: ಸಂವಿಧಾನ ಜಾಗೃತಿ ಜಾಥಾದ ಸುಳ್ಯ ತಾಲೂಕಿನ ಪ್ರಯಾಣ ಬುಧವಾರ ಸಮಾಪನಗೊಂಡಿತು. ಫೆ.17ರಂದು ಕನಕಮಜಲು ಗ್ರಾಮ ಪಂಚಾಯತ್ನಲ್ಲಿ ಆರಂಭಗೊಂಡ ಸಂವಿಧಾನ ಜಾಗೃತಿ ಜಾಥಾದ ತಾಲೂಕಿನ ಪ್ರಯಾಣ ಕೊಲ್ಲಮೊಗ್ರ ಗ್ರಾಮ ಪಂಚಾಯತ್ನಲ್ಲಿ ಸಮಾಪನಗೊಂಡಿತು. ತಾಲೂಕಿನ 25 ಗ್ರಾಮ ಪಂಚಾಯತ್ ಮತ್ತು
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಜಾಥಾ ಪ್ರಯಾಣಿಸಿತು. ಸುಳ್ಯ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯತ್ಗಳಲ್ಲಿ
ಸಂವಿಧಾನ ಜಾಗೃತಿ ಜಾಥಾವು ಬುಧವಾರ ಪ್ರಯಾಣ ನಡೆಸಿತು. ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯ, ದೇವಚಳ್ಳ, ಮಡಪ್ಪಾಡಿ, ಗುತ್ತಿಗಾರು, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರ ಪಂಚಾಯತ್ಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂವಿಧಾನ ಪೀಠಿಕೆ ಪಠಣ, ಸಂವಿಧಾನ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಅರಿವು, ಸಾರ್ವಜನಿಕ ಸಭೆ, ಬೀದಿ ನಾಟಕ, ಪೂರ್ಣಕುಂಭ ಸ್ವಾಗತ, ಬೈಕ್, ರಿಕ್ಷಾ ವಾಹನ ಜಾಥಾ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು.