ಅರಂತೋಡು:ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸಂವಿಧಾನದ ಅರಿವು ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ ‘ಹಿಂದೆ ಶಿಕ್ಷಣ,ಜಮೀನು,ಕಾನೂನು ಇವೆಲ್ಲಾ ಕೆಲವರ ಮಾತ್ರ ಅಥವಾ
ಆರ್ಥಿಕವಾಗಿ ಬಲಾಡ್ಯರಾಗಿದ್ದವರ ಸ್ವತ್ತಾಗಿತ್ತು, ಇವತ್ತು 16 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ಕಾನೂನು ರಚನೆಯಾಗಿದೆ. ಆರ್ಥಿಕವಾಗಿ ಬಲಾಡ್ಯರಾಗಿದ್ದವರಲ್ಲಿ ಮಾತ್ರ ಇದ್ದ ಜಮೀನು ಎಲ್ಲರಿಗೂ ದೊರಕುವಂತಾಯಿತು. ಇದಕ್ಕೆ ಕಾರಣವಾಗಿದ್ದೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ನಮ್ಮ ಸಂವಿಧಾನ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಪ್ರಜಾಧ್ವನಿಯ ಗೌರವ ಸದಸ್ಯರು ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಕೆ.ಪಿ ಜಾನಿ ಇವರು ಪ್ರಸ್ತಾವಿಕ ಮಾತನಾಡಿ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಡಾ. ಬಾಬಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಅರ್ಪಿಸಿದರು.ಸಂವಿಧಾನದ ಆಶಯದಂತೆ ನಾವೆಲ್ಲರೂ ತಾಯಿ ಭಾರತಿಯ ಮಕ್ಕಳು ಎನ್ನುವ ನೆಲೆಯಲ್ಲಿ ಒಂದಾಗಿ ಬಾಳಬೇಕು ಎಂದು ಹೇಳಿದರು.
ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್. ಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಜಾಧ್ವನಿ ಕರ್ನಾಟಕದ ಸಂಚಾಲಕ ಗೋಪಾಲ್ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು ಕಾಂತಿ ಬಿ.ಎಸ್ ಸ್ವಾಗತಿಸಿ ಪ್ರಧ್ಯಾಪಕ ಸುರೇಶ್ ವಾಗ್ಲೆ ವಂದಿಸಿದರು.ನೆಹರೂ ಸ್ಮಾರಕ ಪದವಿಪೂರ್ವ ಕಾಲೇಕಾಲೇಜಿನ ಪ್ರಾಧ್ಯಾಪಕ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಪ್ರಜಾಧ್ವನಿ ಕರ್ನಾಟಕ ಇದರ ಗೌರವ ಸದಸ್ಯರು ಸುಳ್ಯ ನಗರಪಂಚಾಯತ್ ಸದಸ್ಯರಾದ ಉಮ್ಮರ್ ಕೆ.ಎಸ್,ರಾಜು ಪಂಡಿತ್ ,ಸಂಪಾಜೆ ಗ್ರಾಮಪಂಚಾಯತ್ ಸದಸ್ಯೆ ಲೆಸ್ಸಿಮೊನಾಲಿಸ, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಪ್ರಮಿಳಾ ಪೆಲ್ತಡ್ಕ,ಐ.ಎನ್.ಟಿ.ಯು.ಸಿ ತಾಲೂಕು ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಮಹೇಶ್ ಬೆಳ್ಳಾರ್ಕರ್, ಕೇಶವ ಪಾಟಾಳಿ, ಭರತ್ ಕುಕ್ಕುಜಡ್ಕ , ಸಾಹುಕಾರ್ ಅಶ್ರಫ್ , ದಿವಾಕರ್ ಪೈ, ಲಲನ ಕೆ.ಆರ್, ಸಿಲ್ವೆಸ್ಟರ್ ಡಿಸೋಜ, ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಸಿಬ್ಬಂದಿ ವರ್ಗ,ಮತ್ತಿತರರು ಉಪಸ್ತಿತರಿದ್ದರು.