ಸುಳ್ಯ: ಸುಳ್ಯ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ “ಸಂಸ್ಕಾರ ವಾಹಿನಿ ಶಿಬಿರ -2024” ಇದರ ಉದ್ಘಾಟನಾ ಸಮಾರಂಭವು ಕೇಶವಕೃಪಾದ ಕೇಶವ ಕಿರಣ ಸಭಾಂಗಣದಲ್ಲಿ ಏ.13 ರಂದು ಜರುಗಿತು.
ಕಳೆದ 24ವರ್ಷಗಳಿಂದ ಕಲಾ ಜ್ಞಾನದ ಸ್ಪರ್ಶದೊಂದಿಗೆ ಸಂಸ್ಕಾರ ಶಿಕ್ಷಣವನ್ನು
ಶಿಬಿರದ ಮುಖೇನ ಪಸರಿಸುತ್ತಾ ಬಂದಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಲತಾ ಮಧುಸೂದನ್ ನೆರವೇರಿಸಿ ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಶಿಕ್ಷಣದ ಅಗತ್ಯತೆ ಮತ್ತು ಅನಿವಾರ್ಯತೆಯ ಬಗ್ಗೆ ಮಾತನಾಡಿ “ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ , ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಹೇಳಿದರು.
ವೇದಿಕೆಯಲ್ಲಿ ನಮಿತಾರಾವ್, ಜಯಶ್ರೀ ವಸಂತ್, ಗೋಪಾಲಕೃಷ್ಣ ಭಟ್ ವಗೆನಾಡು, ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟದ ಉಪಸ್ಥಿತರಿದ್ದರು.
ಜಲಜಾಕ್ಷಿ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ನಾಗರಾಜ್ ಭಟ್ ಸ್ವಾಗತಿಸಿ, ಸುಮಲತಾ ಶಾಂತಿನಗರ ವಂದಿಸಿದರು. ಏ.18 ರ ತನಕ ಸಂಸ್ಕಾರ ವಾಹಿನಿ ಬೇಸಿಗೆ ಶಿಬಿರ ನಡೆಯಲಿದ್ದು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಶಿಬಿರದ ಪ್ರತಿದಿನವು ಉಚಿತ ಶಿಕ್ಷಣದೊಂದಿಗೆ ಊಟ-ಉಪಹಾರ ಪಠ್ಯಪುಸ್ತಕಗಳನ್ನು ನೀಡಲಾಗುತ್ತದೆ.