ಸುಳ್ಯ: ಸಂಸ್ಕೃತ ಮಾತನಾಡುವ ಮೂಲಕ ಕಲಿಯುವ ಮೂಲಕ ಸಂಸ್ಕೃತ ಭಾಷೆಯನ್ನು ಉಳಿಸಬೇಕು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಹೇಳಿದರು.
ಅವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಕೃತ ಭಾಷಾ
ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸಂಸ್ಕೃತ ಸಮೃದ್ಧವಾದ ಭಾಷೆ. ಅದು ಎಲ್ಲಾ ಭಾಷೆಗಳಲ್ಲೂ ಅಡಕವಾಗಿದೆ. ಅದನ್ನು ಅರ್ಥೈಸಿಕೊಂಡು ಕಲಿತು ಸಂಸ್ಕೃತ ಭಾಷೆಯನ್ನು ಉಳಿಅಬೇಕು ಎಂದು ಹೇಳಿದರು. ಶಿಕ್ಷಕಿ ಜಯಂತಿ ಕೆ ಸ್ವಾಗತಿಸಿದರು. ಶಿಕ್ಷಕ ದೇವಿಪ್ರಸಾದ ಜಿ ಸಿ ವಂದಿಸಿದರು. ಶಿಕ್ಷಕಿ ಶ್ರೀದೇವಿ ಪಿ. ಎಸ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.