ಕಾಸರಗೋಡು: ದುಬೈ ಮಲಬಾರ್ ಸಾಂಸ್ಕ್ರತಿಕ ವೇದಿಕೆ ಕಾಸರಗೋಡು ಇದರ ವತಿಯಿಂದ ನೀಡುವ ಮಲಬಾರ್ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಕೆಪಿಸಿಸಿ ವಕ್ತಾರ ಹಾಗು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ನೀಡಲಾಗಿದೆ. ಕಾಸರಗೋಡು ಬ್ಲಾಕ್ ಪಂಚಾಯತ್ ಆಡಿಟೋರಿಯಂನಲ್ಲಿ ನಡೆದ ಓಣಂ ಆಚರಣೆ ಸಮಾರಂಭದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದ್ಯಮಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಮಾಹಿನ್ ಹಾಜಿ ಕಲ್ಲಟ್ರ ಪ್ರಶಸ್ತಿ ಪ್ರದಾನ ಮಾಡಿದರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶೈಮ ಶಾಲು ಮತ್ತು ಸ್ಮರಣಿಕೆ
ನೀಡಿ ಸನ್ಮಾನಿಸಿದರು. ಕೇರಳದ ಖ್ಯಾತ ಕವಿ ಕೃಷ್ಣಕುಮಾರ್ ಪಳ್ಳಿಯತ್, ಗಾಯಕಿ ಸುಲೇಖ ಬಶೀರ್, ಗಾಯಕ ಕಲಾಭವನ್ ರಾಜು, ಕನ್ನಡ ಎಂ ಎ ಪದವಿಯಲ್ಲಿ ಕೇರಳ ರಾಜ್ಯದಲ್ಲಿ ಗರಿಷ್ಟ ಅಂಕ ಪಡೆದ ರಕ್ಷಾ ಎನ್ ಇವರುಗಳನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಶಸ್ತಿ ಮತ್ತು ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಟಿ ಎಂ ಶಾಹಿದ್ ತೆಕ್ಕಿಲ್ ಈ ಪ್ರಶಸ್ತಿ ಮತ್ತು ಸನ್ಮಾನ ನನ್ನ ಸಮಾಜ ಸೇವೆ ಮತ್ತಿತರ ಕೆಲಸವನ್ನು ಇನ್ನಷ್ಟು ಹೆಚ್ಚು ಜವಾಬ್ದಾರಿಯಿಂದ ಮಾಡಲು ಪ್ರೋತ್ಸಾಹಿಸಿದಂತೆ ಎಂದು ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷ ಅಶ್ರಪ್ ಕಾರ್ಲೆ ಸ್ವಾಗತಿಸಿದರು. ಹನೀಫ್ ವಂದಿಸಿದರು ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಡಿ ವೈ ಎಸ್ ಪಿ ಸುಕುಮಾರನ್, ಗಂಗಾಧರನ್, ವೀಣಾ ಸಹಿತ ಸರಕಾರಿ ಅಧಿಕಾರಿಗಳು ಉದ್ಯೋಗಿಗಳು ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಿ ಓಣಂ ಹಬ್ಬ ಆಚರಿಸಿದರು. ಓಣಂ ಸದ್ಯ ಏರ್ಪಡಿಸಲಾಯಿತು.