ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯಪ್ರಾಕೃತಿಕ ವಿಕೋಪ ಟಾಸ್ಕ್ ಪೋರ್ಸ್ ಸಮಿತಿ ಸಭೆಯು ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹೊಳೆಯ ಹೂಳು ಎತ್ತುವ ಬಗ್ಗೆ, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಸಮಿತಿ ರಚಿಸಲಾಯಿತು. ತುರ್ತು ಸಂದರ್ಭದಲ್ಲಿ ಬೇಕಾದ ಅಗತ್ಯ ಸಾಮಗ್ರಿ, ಕಾಳಜಿ ಕೇಂದ್ರದ ವ್ಯವಸ್ಥೆ ಬಗ್ಗೆ ಸಭೆಯಲ್ಲಿ
ಚರ್ಚಿಸಲಾಯಿತು. ಅಪಾಯಕಾರಿ ಮರಗಳ ತೆರವು, ಕಳೆದ ಬಾರಿ ಮನೆ ಕಳೆದುಕೊಂಡ ಪಲಾನುಭವಿಗಳಿಗೆ ಕಂತಿನ ಹಣ ಬಾರದಿರುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ನೋಡೆಲ್ ಅಧಿಕಾರಿ ವಲಯ ಅರಣ್ಯಾಧಿಕಾರಿ ಮಂಜುನಾಥ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಗ್ರಾಮ ಕರಣಿಕರಾದ ಮಿಯಾ ಸಾಬ್ ಮುಲ್ಲಾ, ಸಂಪಾಜೆ ಸೊಸೈಟಿ ಅಧ್ಯಕ್ಷರು ಹಾಗೂ ಗ್ರಾ.ಪಂ.ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ ಸದಸ್ಯರಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಅಬೂಸಾಲಿ, ಎಸ್. ಕೆ. ಹನೀಫ್, ಶೌವಾದ್ ಗೂನಡ್ಕ, ವಿಮಲಾ ಪ್ರಸಾದ್, ವಿಜಯ ಕುಮಾರ್ ಆಲಡ್ಕ, ರಿಕ್ಷಾ ಯೂನಿಯನ್ ಅಧ್ಯಕ್ಷ ಕೇಶವ ಬಂಗ್ಲೆಗುಡ್ಡೆ, ಯುವಕ ಮಂಡಲದ ಸುಧಾಕರ್, ಧರ್ಮಸ್ಥಳ ಶೌರ್ಯ ತಂಡದ ಚಿದಾನಂದ, ಭಾರತಿ, ಸವಿತಾ ಆಶಾ ಕಾರ್ಯಕರ್ತರಾದ ಸವಿತಾ ರೈ ಪ್ರೇಮಲತಾ, ಸೌಮ್ಯ, ಪೊಲೀಸ್ ಹೊರಠಾಣೆ ಅಧಿಕಾರಿ ನಾಗೇಶ್, ಕಮ್ಯುನಿಟಿ ಹೆಲ್ತ್ ಆಫೀಸರ್ ಹರ್ಷಿತ ಗ್ರಾಮ ಪಂಚಾಯತ್ನ ಉಮೇಶ್, ಹರ್ಷಿತ್ ಹಾಗೂ ಪಂಚಾಯತ್ ಪಂಪ್ ಚಾಲಕರಾದ ಗಣೇಶ್ ಗೂನಡ್ಕ, ರಾಜೇಶ್ ಸಂಪಾಜೆ, ಗಣೇಶ್ ಆಲಡ್ಕ, ಚಂದ್ರಶೇಖರ ಕಡೆಪಾಲ, ಹಸೈನಾರ್ ದೊಡ್ಡಡ್ಕ, ತಾಹಿರ, ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಉಪಸ್ಥಿತರಿದ್ದರು