ಸಂಪಾಜೆ:ದಕ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಆಚರಣೆಯ ಸಿದ್ಧತೆ ಕುರಿತು ವಿವಿಧ ಸಮಿತಿಗಳ ಪೂರ್ವಭಾವಿ ಸಭೆ ನಡೆಯಿತು.ಸಂಘದ ಸಮನ್ವಯ ಸಭಾಂಗಣದಲ್ಲಿ
ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ವಹಿಸಿದ್ದರು. ಅವರು ಮಾತನಾಡಿ

ಡಿಸೆಂಬರ್ ತಿಂಗಳ 24 ಹಾಗೂ 31 ರಂದು ಮತ್ತು ಜನವರಿ ತಿಂಗಳ 1 ರಂದು ನಡೆಯುವ ಕ್ರೀಡಾಕೂಟದ ಬಗ್ಗೆ, ಜನವರಿ 21 ಮತ್ತು 22 ರಂದು ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್, ಸಂಘದ ನಿರ್ದೇಶಕರಾದ ಗಣಪತಿ ಭಟ್ ಪಿ.ಎನ್, ಆನಂದ ಪಿ.ಎಲ್, ಉಷಾ ಕೆ ಎಂ, ಸುಮತಿ ಶಕ್ತಿವೇಲು, ಜಗದೀಶ ರೈ, ಯಮುನಾ ಬಿ ಎಸ್, ಹಮೀದ್ ಎಚ್, ಪ್ರಕಾಶ್ ಕೆಪಿ ಹಾಗೂ ರಾಜೀವಿ ಬೈಲೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ವಂದಿಸಿದರು. ಸಭೆಯಲ್ಲಿ ವಿವಿಧ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಕಾರ್ಯದರ್ಶಿ ಹಾಗೂ ಸದಸ್ಯರು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಯಾನಂದ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.