ಸಂಪಾಜೆ:ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಡಿ.23ರಂದು ನಡೆಯುತ್ತಿದ್ದು ಬಿರುಸಿನ ಮತದಾನ ನಡೆಯುತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿರುಸಿನ ಪೈಪೋಟಿ ಕಂಡು ಬಂದಿದ್ದು 12 ಸ್ಥಾನಗಳಿಗೆ ಒಟ್ಟು 27 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 770 ಮತದಾರರು 27 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನಿರ್ಧರಿಸಲಿದ್ದಾರೆ. ಮಧ್ಯಾಹ್ನದ ವೇಳೆಗೆ 500ಕ್ಕೂ ಹೆಚ್ಚು ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಸಾಮಾನ್ಯ 6 ಸ್ಥಾನಗಳಿಗೆ
13 ಮಂದಿ ಕಣದಲ್ಲಿದ್ದಾರೆ.ಸಹಕಾರಿ ಅಭಿವೃದ್ಧಿ ರಂಗದಿಂದ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಜೋನಿ ಕೆ.ಪಿ, ಸಂಜೀವ ಪೂಜಾರಿ, ಸಿಲ್ವೆಸ್ಟರ್ ಡಿಸೋಜ, ಜ್ಙಾನಶೀಲನ್(ವಿ.ರಾಜು ನೆಲ್ಲಿಕುಮೇರಿ), ಸ್ವತಂತ್ರ ಅಭ್ಯರ್ಥಿಯಾಗಿ ಜಿ.ಕೆ.ಹಮೀದ್ ಗೂನಡ್ಕ ಸ್ಪರ್ಧಿಸುತ್ತಿದ್ದಾರೆ.
ಸಮಾನ ಮನಸ್ಕರ ಸಮನ್ವಯ ಸಹಕಾರಿ ಬಳಗದಿಂದ ಆನಂದ ಪಿ.ಎಲ್, ಗಣಪತಿ ಭಟ್.ಪಿ.ಎನ್, ಮನೀಶ್ ಗೂನಡ್ಕ, ಲೋಕನಾಥ್ ಎಸ್.ಪಿ, ಶ್ರೀಧರ ಬಿ, ಸದಾನಂದ ರೈ ಕೆ.ಎಂ.,ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಅಬೂಸಾಲಿ ಪಿ.ಕೆ,ಸಮನ್ವಯ ಸಹಕಾರಿ ಬಳಗದಿಂದ ಕುಂಞಿಕಣ್ಣ ಮಣಿಯಾಣಿ ಕೆ ಸ್ಪರ್ಧಿಸುತ್ತಿದ್ದಾರೆ.ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಜಗದೀಶ ರೈ ಕೆ.ಆರ್ ಸಮನ್ವಯ ಸಹಕಾರಿ ಬಳಗದಿಂದ ವರದರಾಜ ಯಸ್.ಟಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಕೇಶವ ಬಂಗ್ಲೆಗುಡ್ಡೆ ಸ್ಪರ್ಧಿಸುತ್ತಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಯಮುನಾ ಬಿ.ಎಸ್, ಪ್ರಮೀಳಾ ಪೆಲ್ತಡ್ಕ, ಸಮನ್ವಯ ಸಹಕಾರಿ ಬಳಗದಿಂದ ಅನನ್ಯ ಯು.ಎಂ. ರೀನ ಮರೀಠಾ ಕುಟ್ಹೀನ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸುಮತಿ ಎಸ್. ಸ್ಪರ್ಧಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಉಷಾ ರಾಮ ನಾಯ್ಕ ಹಾಗೂ ಸಮನ್ವಯ ಸಹಕಾರಿ ಬಳಗದಿಂದ ವಿಜಯಕುಮಾರ್ ಆಲಡ್ಕ ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ
ಸಹಕಾರಿ ಅಭಿವೃದ್ಧಿ ರಂಗದಿಂದ ಸುಶೀಲ ಬಾಲಕೃಷ್ಣ ಹಾಗೂ ಬಳಗದಿಂದ ಜಗದೀಶ ಜಿ.ವಿ. ಸ್ಪರ್ಧಿಸುತ್ತಿದ್ದಾರೆ.