ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ನೇತೃತ್ವದಲ್ಲಿ ಜನಪ್ರತಿನಿಧಿಗಳ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲ್ಯೆ ಮುಗಿಲನ್ ಅವರನ್ನು ಭೇಟಿಯಾಗಿ ಸಂಪಾಜೆ ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿ ಅದನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಘನ ತಾಜ್ಯ ಘಟಕಕ್ಕೆ ಸ್ಥಳ, ಸ್ಮಶಾನಕ್ಕೆ ಸರಕಾರದಿಂದ ಮಂಜೂರು ಆಗಿರುವ ಸ್ಥಳಕ್ಕೆ ತಡೆಬೇಲಿ ನಿರ್ಮಾಣ, ಶವ ಸಂಸ್ಕಾರ ನಡೆಸಲು
ವ್ಯವಸ್ಥೆ ಮಾಡಲು ಅಗತ್ಯ ಕಟ್ಟಡ ಮತ್ತು ಸ್ಥಳ , ಪ್ಲಾಟಿಂಗ್ ಸಮಸ್ಯೆ ಪರಿಹಾರದ ಬೇಡಿಕೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿ ಪರಿಹಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ಲಾಟಿಂಗ್ ಸಮಸ್ಯೆ ಬಗ್ಗೆ ಕಳೆದ ಹಲವು ವರ್ಷಗಳಿಂದ ನಿರಂತರ ಗ್ರಾಮ ಪಂಚಾಯತ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದು. ಸಮಸ್ಯೆ ಪರಿಹಾರ ಆಗಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಲಾಯಿತು. 125 ಸರ್ವೆ ನಂಬ್ರದಲ್ಲಿ 94ಸಿಯಡಿ ಹಕ್ಕು ಪತ್ರ ವಿತರಣೆಗೆ ಬಾಕಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾಳಾದ ರಸ್ತೆಗಳಿಗೆ ಅನುದಾನ, ರಾಷ್ಟ್ರೀಯ ಹೆದ್ದಾರಿ ಬಳಿ ಹಾದು ಹೋಗುವ ನದಿ ಬದಿಯಲ್ಲಿ ಕೃಷಿ ಭೂಮಿಗೆ ತಡೆಗೋಡೆ
ನಿರ್ಮಾಣ, ಗ್ರಾಮ ಪಂಚಾಯತ್ ನ ವಿವಿಧ ಉದ್ದೇಶಕ್ಕೆ 10 ಎಕ್ರೆ ಸ್ಥಳ, ಸಂಪಾಜೆ ಗ್ರಾಮಕರಣಿಕರ ಕಚೇರಿಗೆ ಗ್ರಾಮ ಆಡಳಿತ ಅಧಿಕಾರಿ ನೇಮಕ, ಸಂಪಾಜೆ ಗ್ರಾಮ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಇದ್ದು ಸರಿಯಾದ ಚರಂಡಿ ವೆವಸ್ಥೆ ಇಲ್ಲ ಅದಕ್ಕೆ ಪರಿಹಾರ,ಕಲ್ಲುಗುಂಡಿ ಪೇಟೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆ, ಪಾರ್ಕಿಂಗ್ ಸಮಸ್ಯೆ, ಮಾರುಕಟ್ಟೆ ಸಮಸ್ಯೆ ಮತ್ತು ಹಲವು ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ. ಎ. ಬಾವ ಅವರ ಮುಖಾಂತರ ತೆರಳಿದ ನಿಯೋಗದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್ ಸಂಪಾಜೆ, ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸದಸ್ಯರಾದ ವಿಮಲಾ ಪ್ರಸಾದ್, ಅನುಪಮಾ. ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ಸಂಪಾಜೆ ಗ್ರಾಮದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ನಿಯೋಗದ ಪ್ರಮುಖರು ತಿಳಿಸಿದ್ದಾರೆ.