ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಬಾಭವನದಲ್ಲಿ ನಡೆಯಿತು. ಮಾಸಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ವಾಚಿಸಿದರು. ಸಾರ್ವಜನಿಕ ಅರ್ಜಿ ಹಾಗೂ ಸರಕಾರದ ಸುತ್ತೋಲೆಯನ್ನು ಸಿಬ್ಬಂದಿ ಗೋಪಮ್ಮ ವಾಚಿಸಿದರು. ಸರಕಾರದ ಈಗಿನ ಸುತ್ತೋಲೆಯಂತೆ ಕಟ್ಟಡ ಪರವಾನಿಗೆ ಬಗ್ಗೆ ಚರ್ಚಿಸಲಾಯಿತು. ಯಾವುದೇ ಕಟ್ಟಡ ನಿರ್ಮಿಸುವಾಗ ಗ್ರಾಮ
ಪಂಚಾಯತ್ ಚರಂಡಿ ಮುಚ್ಚಿದರೆ ತೆರವು ಗೊಳಿಸಿ ಸಂಬಂಧಪಟ್ಟ ಕಟ್ಟಡ ವಾರಿಸುದಾರರೇ ಪೈಪ್ ಮೋರಿ ಅಳವಡಿಸಿ ನೀರು ಹರಿಯಲು ಅವಕಾಶ ಮಾಡಿಕೊಡುವುದು. ಹೊಸದಾಗಿ ಅನುಮತಿ ಕೊಡುವಾಗ ಚರಂಡಿ ನಿರ್ಮಿಸಿದ ನಂತರ ಅನುಮತಿ, ವಿದ್ಯುತ್ ನಿರಾಕ್ಷೇಪಣಾ ಪತ್ರ ನೀಡುವುದು. ಪ್ರತಿಯೊಂದು ವಾಣಿಜ್ಯ ಕಟ್ಟಡದಲ್ಲಿ ಟಾಯ್ಲೆಟ್ ಕಡ್ಡಾಯ. ಈ ಬಗ್ಗೆ ನಿರ್ಣಯ ಮಾಡಲಾಯಿತು. ಸಾರ್ವಜನಿಕರ ಮನೆಗಳಲ್ಲಿ ಇರುವ ಸಾಕು ಪ್ರಾಣಿಗಳ ಮಾಹಿತಿಯನ್ನು ಪಡೆಯುವುದು ಹಾಗೂ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡುವವರನ್ನು ಗುರುತಿಸಿ ನೋಟೀಸ್ ನೀಡಿ ದಂಡ ವಿಧಿಸಲು ಅಭಿವೃದ್ಧಿ ಅಧಿಕಾರಿಯವರಿಗೆ ಅಧಿಕಾರ ನೀಡಲಾಯಿತು. ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಕ್ರಿಯಾಯೋಜನೆ ವಿಳಂಬದ ಬಗ್ಗೆ ಚರ್ಚೆ ನಡೆಯಿತು.ಮಕ್ಕಳ ದಿನಾಚರಣೆಯನ್ನು ಶಾಲಾ ಮಕ್ಕಳ ಹಬ್ಬದ ರೀತಿಯಲ್ಲಿ ಅಚರಿಸಲಾಗುವುದು. ಗ್ರಾಮದ 7 ಪ್ರಾಥಮಿಕ ಹಾಗೂ 4 ಪ್ರೌಢಶಾಲೆಗಳ ಸಾಂಸ್ಕೃತಿಕ ಹಬ್ಬ ಮಕ್ಕಳ ಸ್ಪರ್ಧಾ ಕಾರ್ಯಕ್ರಮ ನವಂಬರ್ 14ರಂದು ತೆಕ್ಕಿಲ್ ಶಾಲೆಯಲ್ಲಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಮನೆ ಮಂಜೂರಾಗಿ ನಿರ್ಮಾಣ ಮಾಡದೇ ಬಾಕಿ ಇರುವ ಮನೆಗಳ ಬಗ್ಗೆ ಚರ್ಚೆ ನಡೆಯಿತು ಕೂಡಲೇ ಕಾಮಗಾರಿ ಮಾಡುವಂತೆ ಪಲಾನುಭವಿಗಳಿಗೆ ನೋಟೀಸ್ ನೀಡಲು ತೀರ್ಮಾನಿಸಲಾಯಿತು. ಸ್ವಚ್ಛತೆ ಕಾಪಾಡದ ಕಟ್ಟಡಗಳಿಗೆ ನೋಟೀಸ್ ನೀಡಿ ದಂಡ ವಸೂಲಿ ಮಾಡಲು ಮಾಡಲಾಗುವುದು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಲು
ತೀರ್ಮಾನಿಸಲಾಯಿತು. ಬ್ಯಾನರ್ ಅಳವಡಿಸಲು, ಪ್ರಚಾರ ಮಾಡಲು ನೆರವು ನೀಡಲು ನಿರ್ಧರಿಸಲಾಯಿತು. ಕುಡಿಯುವ ನೀರಿನ ವ್ಯವಸ್ಥೆ ದೂರು ದಾಖಲೆ ಹಾಗೂ ಸಂಪರ್ಕದ ವ್ಯವಸ್ಥಯ ಕಂಪ್ಯೂಟರಿಕರಣ ಮಾಡಲು, ನೀರು ಬೇಕಾದವರಿಗೆ ಮೀಟರ್ ಅಳವಡಿಸಿ ತೆರಿಗೆ ವಿಧಿಸಿ ನೀರು ಒದಗಿಸಲು ತೀರ್ಮಾನಿಸಲಾಯಿತು. ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಮಾಡುವ ಬಗ್ಗೆ ಚರ್ಚಿಸಲಾಯಿತು. ಬೀದಿ ದೀಪಗಳ ದುರಸ್ಥಿ, ಬೀದಿ ನಾಯಿ ಹಾವಳಿ ಬಗ್ಗೆ ಚರ್ಚೆ ನಡೆಯಿತು. ಸಾರ್ವಜನಿಕ ಅರ್ಜಿಗಳ ಶೀಘ್ರದಲ್ಲಿ ವಿಲೇವಾರಿ ಗ್ರಾಮದಲ್ಲಿ ಬೇಕಾ ಬಿಟ್ಟಿ ಕೇಬಲ್ ಅಳವಡಿಕೆ ಮಾಡಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚೆ ನಡೆಯಿತು. ಅನುಮತಿ ಪಡೆಯದೇ ಅಳವಡಿಸಿದ ಕೇಬಲ್ ತೆರವು ಮಾಡಲು ಅಭಿವೃದ್ಧಿ ಅಧಿಕಾರಿಯವರಿಗೆ ಅಧಿಕಾರ ನೀಡಲಾಯಿತು. ಸಭೆಯಲ್ಲಿ ಸದಸ್ಯರಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಅನುಪಮಾ, ಸುಶೀಲ, ರಜನಿ ಶರತ್, ವಿಜಯ ಕುಮಾರ್ ಆಲಡ್ಕ, ವಿಮಲಾ ಉಪಸ್ಥಿತರಿದ್ದರು