ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು. ಮಾರುಕಟ್ಟೆಯ 3 ಹೊಸ ಕೊಠಡಿಯನ್ನು
ಜು.21ರಂದು ಏಲಂ ಮಾಡಲು ತೀರ್ಮಾನಿಸಲಾಯಿತು. ಜು.25 ರಂದು ಪೂ.10.30ಕ್ಕೆ ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟನೆ ಶೀಲಾನ್ಯಾಸ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಯೋಜನೆ ಚರ್ಚೆ ನಡೆಯಿತು. 15 ನೇ ಹಣಕಾಸು ಕ್ರಿಯೋಜನೆ ತಯಾರಿಸಲಾಯಿತು. ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.ಸಾರ್ವಜನಿಕ ಸ್ಥಳಗಳಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತಿದ್ದು ಸ್ಥಳ ಗುರುತಿಸಿ ಹೆಚ್ಚುವರಿ ಸಿ. ಸಿ. ಕ್ಯಾಮರಾ ಅಳವಡಿಸಿ ಎಸೆದವರ ಮೇಲೆ ದಂಡ ಹಾಕಲು ತೀರ್ಮಾನಿಸಲಾಯಿತು. ಸೋಲಾರ್ ಬೀದಿ ದೀಪ ದುರಸ್ಥಿ, ವಿಶೇಷ ಚೇತನರಿಗೆ ಸೌಲಭ್ಯ, ಬೀದಿ ದೀಪ ಖರೀದಿ ಹಾಗೂ ದುರಸ್ಥಿ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಸುಂದರಿ ಮುಂಡಡ್ಕ, ಜಗದೀಶ್ ರೈ, ಸುಮತಿ ಶಕ್ತಿವೇಲು, ಅಬೂಸಾಲಿ. ಎಸ್. ಕೆ. ಹನೀಫ್, ಶೌವಾದ್ ಗೂನಡ್ಕ, ವಿಜಯ ಕುಮಾರ್, ವಿಮಲ ಪ್ರಸಾದ್, ಅನುಪಮಾ, ರಜನಿ ಶರತ್, ಸುಶೀಲ ಉಪಸ್ಥಿತರಿದ್ದರು.