ಸಂಪಾಜೆ:ಸಂಪಾಜೆ ಗ್ರಾಮದ ಗಡಿಕಲ್ಲು-ಮುಂಡಡ್ಕ ರಸ್ತೆ ಕಾಮಗಾರಿ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಹಾಗೂ ತೆಂಗಿನ ಕಾಯಿ ಒಡೆಯುವ ಮೂಲಕ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಸಂಪಾಜೆ ಸೊಸೈಟಿಯ

ಮಾಜಿ ವ್ಯವಸ್ಥಾಪಕ ಶಿವರಾಮ್ ಬಿ. ಆರ್, ಸಂಪಾಜೆ ಸೊಸೈಟಿ ನಿರ್ದೇಶಕರಾದ ಹಮೀದ್ ಪಾಂಬಾರ್ ಮಾತನಾಡಿದರು. ವಾರ್ಡ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್, ಸದಸ್ಯರಾದ ಸುಂದರಿ ಮುಂಡಡ್ಕ, ಜಗದೀಶ್ ರೈ. ರಜನಿ ಶರತ್, ವಿಜಯಕುಮಾರ್ ಆಲಡ್ಕ, ವಿಮಲಾ ಪ್ರಸಾದ್, ಶೌವಾದ್ ಗೂನಡ್ಕ, ಅಬೂಸಾಲಿ ಪಿ. ಕೆ. ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್, ಕೆ. ಎಂ. ಆಶ್ರಫ್ ಗುತ್ತಿಗೆದಾರ ಅಶ್ರಫ್ ಸಂಟ್ಯಾರ್, ಯೂಸುಫ್ ಕಲ್ಲುಗುಂಡಿ, ಅಬ್ದುಲ್ ರಹಿಮಾನ್ ಎಸ್. ಪಿ. ಅಬ್ಬಾಸ್. ಕೆ. ಕೆ. ಸಂಪಾಜೆ ಬದ್ರ್ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಹಮೀದಿಯಾ ಅಂಗನವಾಡಿ ಕಾರ್ಯಕರ್ತರಾದ ಶೀಲಾವತಿ, ಪಂಚಾಯತ್ ಸಿಬ್ಬಂದಿ ಭರತ್, ಉಮೇಶ್, ಸಾರ್ವಜನಿಕರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಸ್. ಕೆ. ಹನೀಫ್ ವಂದಿಸಿದರು.














