ಸುಳ್ಯ:ಕಳೆದ 5 ವರ್ಷಸಲ್ಲಿ ಸಂಪಾಜೆ ಗ್ರಾಮ ಪಂಚಾಯತನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿ ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಲಾಗಿದೆ ಎಂದು ಸಂಪಾಜೆ ಗ್ರಾಮ ಪಂಚಾಯತ್
ಅಧ್ಯಕ್ಷರು ಹಾಗೂ ಸದಸ್ಯರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ.ಕೆ.ಹಮೀದ್ ಗೂನಡ್ಕ ಕಳೆದ 5 ವರ್ಷದಲ್ಲಿ ಪಂಚಾಯತ್ನಲ್ಲಿ 15 ಕೋಟಿಗೂ ಹೆಚ್ಚು ಅನುದಾನ ಬಂದಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ನ ಸ್ವತಃ ನಿಧಿ 15ನೇ ಹಣಕಾಸು ವಿವಿಧ
ಯೋಜನೆಗಳ ಜತೆಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್,ಶಾಸಕರ ನಿಧಿ, ವಿಧಾನ ಪರಿಷತ್ ಸದಸ್ಯರ ನಿಧಿ, ಹಾಗೂ ವಿಶೇಷವಾಗಿ ಕರ್ನಾಟಕ ಸರಕಾರ ಕಾರ್ಮಿಕ ವೇತನ ಪರಿಷ್ಕರಣೆ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರ ವಿಶೇಷ ಪ್ರಯತ್ನದಿಂದ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಅನುದಾನ ಬಂದಿದ್ದು ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು. ಸೋಲಾರ್ ಹೈಮಾಸ್ಟ್ ದೀಪ, ಸಂಪಾಜೆ ಗಡಿಕಲ್ಲು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಅನುದಾನ, ದರ್ಖಾಸ್ತು ಅಂಗನವಾಡಿ ಕಟ್ಟಡಕ್ಕೆ ಅವರಣ ಗೋಡೆ, ದರ್ಖಾಸ್ತು ಗುಡ್ಡೆ ರಸ್ತೆ ಕಾಂಕ್ರೀಟಿಕರಣ, ದರ್ಖಾಸ್ತು ಕೊಪ್ಪದಕಜೆ ರಸ್ತೆ ಕಾಂಕ್ರೀಟಿಕರಣ, ಮುಂಡಡ್ಕ ರಸ್ತೆ ಕಾಂಕ್ರೀಟಿಕರಣ, ಚಟ್ಟೆಕಲ್ಲು ರಸ್ತೆ ಕಾಂಕ್ರೀಟಿಕರಣ, ದಂಡಕಜೆ ರಸ್ತೆ ಕಾಂಕ್ರೀಟಿಕರಣ, ಪೆರುಂಗೊಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಅನುದಾನ ಮಂಜುರಾಗಿ ಟೆಂಡರ್ ಆಗಿದ್ದು, ಕಾಮಗಾರಿ ಶೀಘ್ರ ಅನುಷ್ಠಾನಗೊಳ್ಳಲಿದೆ.
ಚಟ್ಟೆಕಲ್ಲು ರಸ್ತೆಗೆ 5 ಲಕ್ಷ ಹಾಗೂ ಕಡೆಪಾಲ ಕುಯಿಂತೋಡು ರಸ್ತೆಗೆ 5ಲಕ್ಷ ರೂ ಕಾಂಕ್ರೀಟ್ ಕಾಮಗಾರಿ ಮುಕ್ತಾಯಗೊಂಡಿದ್ದು, ಪ್ರಸ್ತುತ ದಂಡೆಕಜೆ ರಸ್ತೆ ಕಾಂಕ್ರೀಟಿಕರಣ,ರಾಜರಾಂಪುರ ಗೂನಡ್ಕ ಶಾಲಾ ಬಳಿ ಶೌಚಾಲಯ ರಚನೆ, ಹಾಗೂ ಸಂಪಾಜೆ ಗ್ರಾಮದ ಕಲ್ಲುಗುಂಡಿ ಆಯುಷ್ಮಾನ್ ಕೇಂದ್ರದ ಬಳಿ ಇಂಟರ್ಲಾಕ್ ಅಳವಡಿಕೆ ಹಾಗೂ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

ಅಲ್ಪಸಂಖ್ಯಾತ ಕಟ್ಟಡ ಯೋಜನೆಯಡಿಯ ಅನುದಾನದ ಕಾಮಗಾರಿ ಪ್ರಾರಂಭವಾಗಬೇಕಾಗಿದೆ. ರಾಜಾರಾಂಪುರ ಗೂನಡ್ಕ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಡೆಪಾಲ ಸಣ್ಣಮನೆ ಗುಡ್ಡೆ ರಸ್ತೆ ಹಾಗೂ ಬಾಚಿಗದ್ದೆ ರಸ್ತೆ, ಬಂಗ್ಲೆಗುಡ್ಡೆ ರಸ್ತೆ ಕಾಮಗಾರಿಗೆ ಅನುದಾನ ಮಿಸಲಿಟ್ಟಿದ್ದು, ಟೆಂಡರ್ ಆಗಿರುತ್ತದೆ.
ಗ್ರಾಮದ ಸಮಗ ಅಭಿವೃದ್ಧಿ ಗುರಿ ಇಟ್ಟಿರುವ ಗ್ರಾಮ ಪಂಚಾಯತ್, ಮಹಿಳೆಯರ ಸ್ವಾಲಂಬನೆ ಗುರಿ ಹೊಂದಿದ್ದು, ಕಸವಿಲೇವಾರಿ ಘಟಕ ವಾಹನ ಹೊಂದಿದು. ಮಹಿಳೆಯರ ಮೂಲಕ ಕಸ ವಿಲೇವಾಗಿ ಮಾಡಲಾಗುತ್ತಿದೆ. ಅಲ್ಲದೆ ಸಂಜೀವಿನಿ ಘಟಕದ ಮೂಲಕ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.
ಗ್ರಾಮ ಪಂಚಾಯತ್ಗೆ 2 ಬಾರಿ ಗಾಂಧಿಗ್ರಾಮ ಪುರಸ್ಕಾರ ದೊರಕಿದೆ.ಅಲ್ಲದೆ ಗ್ರಾಮ ಪಂಛಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ, ರಸ್ತೆ ಕಾಂಕ್ರೀಟಿಕರಣ, ಮಣ್ಣಿನ ಚರಂಡಿ ಕಾಮಗಾರಿ, ಕೃಷಿ ಹೊಂಡ, ಬಿಸಿಯೂಟ ಕಟ್ಟಡ, ಶಾಲಾ ಆವರಣ ಗೋಡೆ, ಸಂಜೀವಿನಿ ಕಟ್ಟಡ, ಕಸ ವಿಲೇವಾರಿ ಘಟಕ, ದನದ ಹಟ್ಟಿ ಮತ್ತು ಹಲವು ಕಾಮಗಾರಿ ಮಾಡಲಾಗಿದೆ.
ರಸ್ತೆಗಳಿಗೆ ಕಾಂಕ್ರೀಟ್, ಚರಂಡಿ ಕಾಂಕ್ರೀಟ್ ಮಾಡುವ ಗುರಿ ಇಟ್ಟುಕೊಂಡಿದ್ದು ಡಿಸೆಂಬರ್ ಜನವರಿ ವೇಳೆಗೆ ಪ್ರಗತಿ ಸಾಧ್ಯವಾಗಲಿದೆ.ಮುಖ್ಯಮಂತ್ರಿ,ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ನಸೀರ್ ಅಹಮ್ಮದ್, ಮೋಹನ್ ಕೊಂಡಜ್ಜಿ, ಬಿ.ಕೆ ಹಂಪ್ರಸಾದ್, ಐವನ್ ಡಿಸೋಜ, ಬಿ.ಎಂ.ಫಾರೂಕ್, ಸ್ಥಳೀಯ ಶಾಸಕರಾದ ಭಾಗೀರಥಿ ಮುರುಳ್ಯ, ಮಾಜಿ ವಿಧಾನಪರಿಷತ್ ಸದಸ್ಯರು ಮೆಸ್ಕಾಂ ಸಲಹಾ ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್, ಕರ್ನಾಟಕ ಸರಕಾರದ ಕಾರ್ಮಿಕ ವೇತನ ಪರಿಷ್ಕರಣೆ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಲ್ ಅನುದಾನ ನೀಡಿ ಸಹಕರಿಸಿದ್ದಾರೆ. ಎಲ್ಲರಿಂದ ಅನುದಾನ ತರುವ ನಿಟ್ಟಿನಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್ ಅವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಅಭಿವೃದ್ಧಿಗೆ ಯಾರು ಸಹಕಾರ ನೀಡಿದರೂ ಅದನ್ನು ಸ್ವಾಗತಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ, ಸದಸ್ಯರಾದ ಸುಂದರಿ ಮುಂಡಡ್ಕ, ವಿಮಲ ಪ್ರಸಾದ್ ಉಪಸ್ಥಿತರಿದ್ದರು.













