ಸಂಪಾಜೆ: ನೂರುಲ್ ಹುದಾ ಮದ್ರಸ ಸಂಪಾಜೆ ಇದರ 2023-24 ಸಾಲಿನ SBV ಎಸ್ಬಿಯ ಮತದಾನವು ಮದ್ರಸಾ ಹಾಲಿನಲ್ಲಿ ನಡೆಯಿತು. 97% ರಷ್ಟು ಮತದಾರರು ತಮ್ಮ ಮತವನ್ನು ಶಿಸ್ತುಬದ್ಧವಾಗಿ ಚಲಾಯಿಸಿದರು. ನಾಲ್ವರು ವಿದ್ಯಾರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಮೊದಲ ಅಭ್ಯರ್ಥಿಯಾಗಿ
ಟೋಪಿ ಚಿಹ್ನೆಯ ಮುಝಮ್ಮಿಲ್, ಎರಡನೆಯ ಅಭ್ಯರ್ಥಿಯಾಗಿ ಪುಸ್ತಕ ಚಿಹ್ನೆಯ ಶಹಾಂ, ಮೂರನೆಯ ಅಭ್ಯರ್ಥಿಯಾಗಿ ಗಡಿಯಾರ ಚಿಹ್ನೆಯ ಸಫ್ರತ್, ನಾಲ್ಕನೇ ಅಭ್ಯರ್ಥಿಯಾಗಿ ಲೇಖನಿ ಚಿಹ್ನೆಯ ಮುಹಮ್ಮದ್ ಹಾಶಿರ್ ಸ್ಪರ್ಧಿಸಿದರು. ಮತ ಎಣಿಕೆಯ ಕೊನೆಯ ಹಂತದಲ್ಲಿ ಲೇಖನಿ ಚಿಹ್ನೆಯ ಮುಹಮ್ಮದ್ ಹಾಶಿರ್ 68% ಬಹು ಮತದಿಂದ ವಿಜಯ ಸಾಧಿಸಿ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದರು. ಮತದಾನ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ, ಚುನಾವಣೆಯ ಪಾಠವನ್ನು ಪ್ರಾಯೋಗಿಕವಾಗಿ ಬೋಧಿಸಲಾಯಿತು. ವಿದ್ಯಾರ್ಥಿಗಳಿಗೆ ಹೊಸ ಅರಿವು ಮತ್ತು ಅನುಭವವನ್ನು ನೀಡಿತು. ಸಾರ್ವತ್ರಿಕ ಚುನಾವಣೆ ನಡೆಯುವ ಮಾದರಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಇವಿಎಂ ಮಷೀನ್ ಸಿಸ್ಟಮ್ನಲ್ಲಿ ಮತದಾನ ನಡೆಸಲಾಯಿತು. ಚುನಾವಣಾ ಅಧಿಕಾರಿಗಳಾಗಿ ಅಧ್ಯಾಪಕರಾದ ಯೂಸುಫ್ ಸವಾದ್ ಫೈಝಿ ಅಲ್- ಅಲ್ ಮಬರಿ, ಜಬ್ಬಾರ್ ಅಝ್ಹರಿ, ಪಂಚಾಯತ್ ಸದಸ್ಯರಾದ ಹನೀಫ ಎಸ್ ಕೆ, ತಅ್ಝೀರ್ ಸಂಪಾಜೆ ಮತ್ತು ಹಾಶಿರ್ ಸಂಪಾಜೆ ಕಾರ್ಯನಿರ್ವಹಿಸಿದರು.