ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್, ಸುಳ್ಯ ವಲಯ ಅರಣ್ಯ ಇಲಾಖೆ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ಕೋಟಿ ವೃಕ್ಷ ನೆಡುವ ಕಾರ್ಯಕ್ರಮ ಗ್ರಾಮ ಪಂಚಾಯತ್ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಸಂಜೀವಿನಿ ಕಟ್ಟಡದ ಬಳಿ ನಡೆದ ಕಾರ್ಯಕ್ರಮವನ್ನು ಸುಳ್ಯ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್ ಉದ್ಘಾಟಿಸಿ ಮಾತನಾಡಿ ಪರಿಸರದ ಮಹತ್ವದ ಬಗ್ಗೆ
ವಿವರಣೆ ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ತಾಲೂಕು ಐ. ಇ. ಸಿ ಕೋಆರ್ಡಿನೇಟರ್ ನಮಿತಾ,ತಾಂತ್ರಿಕ ಸಲಹೆಗಾರರಾದ ಪ್ರಮೀಳಾ, ಗ್ರಾ.ಪಂ. ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ಎಸ್. ಕೆ. ಹನೀಫ್, ಉಪಸ್ಥಿತರಿದ್ದರು ಬ್ಯಾಂಕ್ ಸಖಿ ಭಾರತಿ, ಪಶು ಸಖಿ ಮಾಲತಿ, ಕೃಷಿ ಸಖಿ ಮೋಹಿನಿ ಮಾಹಿತಿ ನೀಡಿದರು ಅರಣ್ಯ ಇಲಾಖೆಯ ಚಂದ್ರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದಮಯಂತಿ, ಕಾರ್ಯದರ್ಶಿ ರತ್ನಾವತಿ,ಗ್ರಾಮ ಕಾಯಕ ಮಿತ್ರ ಸವಿತಾ ಮಾಜಿ ಪಂಚಾಯತ್ ಅಧ್ಯಕ್ಷೆ ಯಮುನಾ, ಉಮೇಶ್ ಕನಪಿಲ ಹಾಜರಿದ್ದರು ಸಂಜೀವಿನಿ, ಸ್ತ್ರೀ ಶಕ್ತಿ ಸದಸ್ಯರು ಹಾಜರಿದ್ದರು, ಯಶೋಧ ಸ್ವಾಗತಸಿ ಕಾಂತಿ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ವಂದಿಸಿದರು. ಗ್ರಾಮ ಪಂಚಾಯತ್ ನೇತೃತ್ವದಲ್ಲಿ 1000 ಗಿಡ ನೆಡುವ ಯೋಜನೆ ರೂಪಿಸಲಾಗಿದ್ದು ಪ್ರಥಮ ಹಂತವಾಗಿ 500 ಗಿಡಗಳನ್ನು ನೆಡಲಾಯಿತು.