ಸಂಪಾಜೆ: ಕಳೆದ ವರ್ಷ ಉಂಟಾದ ಜಲಪ್ರಳಯದ ಕಾರಣದಿಂದ ಸಂಪಾಜೆ ಭಾಗದಲ್ಲಿ ನದಿಗಳಲ್ಲಿ ಮತ್ತು ಹೊಳೆಯಲ್ಲಿ ತುಂಬಿದ ಮರಳು ಮತ್ತು ಹೂಳನ್ನು ತೆಗೆಯುವ ಕಾರ್ಯಾಚರಣೆ ಜೂ.7ರಿಂದ ಆರಂಭಗೊಳ್ಳಲಿದೆ. ಜೂ.7 ರಂದು ಪೂ.9 ರಿಂದ ಕಲ್ಲುಗುಂಡಿ ಕೂಲಿಶೆಡ್ ಬಳಿಯಿಂದ ಹೂಳು ತೆಗೆಯುವ ಕಾರ್ಯ ಆರಂಭಗೊಳ್ಳಲಿದೆ ಎಂದು
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ತಿಳಿಸಿದ್ದಾರೆ. ಸಂಪಾಜೆ ಗ್ರಾಮದ ಬಹು ಮುಖ್ಯ ಬೇಡಿಕೆಯಾದ ಹೂಳೆತ್ತುವ ಸಮಸ್ಯೆ ಬಗ್ಗೆ ನಿರಂತರ ಹೋರಾಟ ನಡೆದಿತ್ತು. ಇದೀಗ ಹೂಳೆತ್ತುವುದಕ್ಕೆ ಸಂಬಂಧಪಟ್ಟು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೇಮಂತ್ ಅವರು ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಜೂ.6 ರಂದು ಸ್ಥಳಕ್ಕೆ ಭೇಟಿ ಕಾಮಗಾರಿ ಆರಂಭದ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಗ್ರಾ.ಪಂ.ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಜಗದೀಶ್ ರೈ, ಎಸ್. ಕೆ. ಹನೀಫ್, ಹೋರಾಟ ಸಮಿತಿಯ ರವಿಶಂಕರ್ ಭಟ್, ಪದ್ಮಯ್ಯ ಗೌಡ, ನಾಗೇಶ್ ಪಿ. ಆರ್, ಪ್ರಶಾಂತ್ ವಿ. ವಿ. ಕಿಶೋರ್ ಕುಮಾರ್, ಕುಂಞಿಕಣ್ಣ ಮಣಿಯಾಣಿ, ಕಾರ್ಮಿಕ ಮುಖಂಡ ರಾಜು ನೆಲ್ಲಿಕುಮೆರಿ ಅಶ್ರಫ್ ಎಚ್. ಎ ಮಂಜುನಾಥ್ ಅಬೂಬಕ್ಕರ್. ಎಂ. ಸಿ ಮೊದಲದವರು ಉಪಸ್ಥಿತರಿದ್ದರು