ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ನ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ಪಂಚಾಯತ್ ತೆರಿಗೆ ಕುಡಿಯುವ ನೀರು, ಲೈಸೆನ್ಸ್ ಸಮಯಕ್ಕೆ ಸರಿಯಾಗಿ ಪಾವತಿಮಾಡಿ ಸಹಕರಿಸುವಂತೆ ಹಾಗೂ ಗ್ರಾಮದ ಅಭಿವೃದಿಯಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್ ಸ್ವಾಗತಿಸಿದರು. ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಅನುಪಾಲನಾ ವರದಿ
ವಾಚಿಸಿದರು. ವರದಿ ಮೇಲೆ ಚರ್ಚೆ ನಡೆಯಿತು. ಕುಡಿಯುವ ನೀರಿನ ಬಿಲ್ ವಸೂಲಿ ಕಡಿಮೆಯಾಗಿದೆ.ಕುಡಿಯುವ ನೀರಿನ ಬಿಲ್ ಸಂಗ್ರಹಕ್ಕೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಯಿತು. ದರ್ಕಾಸ್ ಹಾಗೂ ಕಡೆಪಾಲ ಬಳಿ ಕುಡಿಯುವ ನೀರಿನ ಟ್ಯಾಂಕ್ ರಚನೆ. ಗ್ರಾಮದ ರಸ್ತೆ ಚರಂಡಿ ರಚನೆ ಬಗ್ಗೆ ಗ್ರಾಮಸ್ಥರು ಚರ್ಚಿಸಿದರು. ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿ ದರ್ಕಾಸ್ ಬಳಿ ವಿದ್ಯುತ್ ತಂತಿ ಬದಲಾವಣೆ. ಪ -ಜಾತಿ ಕಾಲನಿಯಲ್ಲಿ ವಿದ್ಯುತ್ ತಂತಿ ಬದಲಾವಣೆ, ದರ್ಕಾಸ್ ಕುಡಿಯುವ ನೀರಿನ ಸಮಸ್ಯೆ, ಜನತಾ ಕಾಲನಿ ಕುಡಿಯುವ ನೀರಿನ ಸಮಸ್ಯೆ , ಆನೆ ಹಾವಳಿ, ಗೂನಡ್ಕ ಶಾರದಾ ಶಾಲಾ ಬಳಿ ಇರುವ ವಿದ್ಯುತ್ ತಂತಿ ಬದಲಾವಣೆ. ಕಲ್ಲುಗುಂಡಿ ಆರ್. ಎಂ. ಎಸ್. ಎ ಹೈಸ್ಕೂಲ್ ಆರಂಭ ಆಗಿ 10 ವರ್ಷ ಕಳೆದರೂ ಸ್ವತಃ ಕಟ್ಟಡ ಇಲ್ಲದ ಕುರಿತು, ಅಧ್ಯಾಪಕರ ಕೊರತೆ, ಪೆರುಂಗೋಡಿ ಪೇರಡ್ಕ ರಸ್ತೆಯಲ್ಲಿ ಉಬ್ಬು ತಗ್ಗಿಸುವಿಕೆ, ಕೃಷಿ ತೋಟಗಾರಿಕೆ. ಸವಲತ್ತುಗಳ. ಮಾಹಿತಿ. ಅರಣ್ಯ, ಕಂದಾಯ, ಅಬಕಾರಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್, ಪಶು,ಅಂಚೆ, ಕೆನರಾ ಬ್ಯಾಂಕ್, ಪೊಲೀಸ್, ಶಿಕ್ಷಣ, ಹಿಂದುಳಿದ ವರ್ಗಗಳ ಇಲಾಖೆ ಮಹಿಳಾ ಮಕ್ಕಳ ಕಲ್ಯಾಣ ಅರೋಗ್ಯ ಇಲಾಖೆಯ ಸವಲತ್ತು ಬಗ್ಗೆ ಮಾಹಿತಿ ಮೆಸ್ಕಾಂ, ಬಹುತೇಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ತೋಟಗಾರಿಕೆ ಇಲಾಖೆಯ ಸಹಾಯಕಿ ಸುಹಾನಾ ನೋಡೆಲ್ ಅದಿಕಾರಿಯಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಬೀದಿ ದೀಪ, ಕುಡಿಯುವ ನೀರಿನ ಬಗ್ಗೆ
ಚರ್ಚೆ ನಡೆಯಿತು. ತೆರಿಗೆ ಪರಿಷ್ಕರಣೆ, ಸಂವಿದಾನ ಕಾರ್ಯಕ್ರಮ ಬಗ್ಗೆ ಚರ್ಚೆ ನಡೆಯಿತು ಚರ್ಚೆಯಲ್ಲಿ ಗಣಪತಿ ಭಟ್, ಕಿಶೋರ್, ಹಸೈನಾರ್ ಕೇಶವ ಬಂಗ್ಲೆಗುಡ್ಡೆ ವಿಜಯ ಆಲಡ್ಕ ಮೊಹಮ್ಮದ್ ಕುಂಞಿ ಗೂನಡ್ಕ, ನಾಗೇಶ್ ಪಿ. ಆರ್, ರಾಜೇಶ್, ಸವಿತಾ ರೈ, ಪುಷ್ಪರಾಜ್ ಗಾಂಭೀರ, ಜಯಂತಿ, ಕಾಂತಿ, ಭಾಗವಹಿಸಿದರು. ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ಆಶಾ, ಅಂಗನವಾಡಿ, ಅರೋಗ್ಯ, ಕಾರ್ಯಕರ್ತರು, ಶಾಲಾ ಮುಖ್ಯ ಗುರುಗಳು, ಪಂಚಾಯತ್ ಸಿಬ್ಬಂದಿಗಳು, ಕುಡಿಯುವ ನೀರಿನ ಪಂಪ್ ಆಪರೇಟರ್ ಗಳು ಹಾಜರಿದ್ದರು. ವೇದಿಕೆಯಲ್ಲಿ ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಅನುಪಮಾ, ಶೌವಾದ್ ಗೂನಡ್ಕ, ರಜನಿ, ಸುಶೀಲ, ವಿಜಯ ಕುಮಾರ್ ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದ್ದರು. ಜಗದೀಶ್ ರೈ ವಂದಿಸಿದರು. ಹರ್ಷಿತ್ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು.