ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ದರ್ಕಾಸ್ ವಾರ್ಡ್ ನಲ್ಲಿ 10 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಅ.7 ರಂದು ನಡೆಯಿತು. ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ದರ್ಕಾಸ್ ವಾರ್ಡ್ ಕೊರಂಬಡ್ಕ ರಸ್ತೆ ಕಾಂಕ್ರೀಟೀಕರಣ, ಕೊಪ್ಪತಕಜೆ ರಸ್ತೆ ಕಾಂಕ್ರಿಟೀಕರಣ, ದರ್ಕಾಸ್ ಕಾಂಕ್ರಿಟ್ ಚರಂಡಿ ಕಾಮಗಾರಿ, ದರ್ಕಾಸ್ ಅಂಗನವಾಡಿ ಹಾಗೂ

ಅರೋಗ್ಯ ಸಹಾಯಕಿ ಕೇಂದ್ರದ ಆವರಣ ಗೋಡೆ ಕಾಮಗಾರಿಗಳ ಉದ್ಘಾಟನೆ ನಡೆಯಿತು.ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸ, ಸದಸ್ಯರಾದ ಸುಂದರಿ ಮುಂಡಡ್ಕ, ಸದಸ್ಯರಾದ ಜಗದೀಶ್ ರೈ, ಸುಮತಿ ಶಕ್ತಿವೇಲು, ಅನುಪಮಾ, ವಿಮಲಾ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದ ಕಟ್ಟೆ, ಸಹಕಾರಿ ಸಂಘದ ನಿರ್ದೇಶಕರಾದ ಗಣಪತಿ ಭಟ್, ಸತ್ಯನಾರಾಯಣ ಭಟ್, ಗೂನಡ್ಕ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ಲ ಹಾಜಿ, ದಿನಕರ ಸಣ್ಣಮನೆ ಮುಖ್ಯ ಅತಿಥಿಗಳಾಗಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದರು.
ವಾರ್ಡ್ ಸದಸ್ಯರಾದ ಪಿ.ಕೆ. ಅಬೂಸಾಲಿ ಸ್ವಾಗತಿಸಿ, ಶೌವಾದ್ ಗೂನಡ್ಕ ವಂದಿಸಿದರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರ 3 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಸಂಪಾಜೆ ಗ್ರಾಮದ ದರ್ಕಾಸ್ ಅಂಗನವಾಡಿ ಹಾಗೂ ಅರೋಗ್ಯ ಸಹಾಯಕಿ ಕೇಂದ್ರದ ಆವರಣ ಗೋಡೆ ಕಾಮಗಾರಿ, ಗ್ರಾಮ ಪಂಚಾಯತ್ ಅನುದಾನದಲ್ಲಿ 4 ಲಕ್ಷ ವೆಚ್ಚದಲ್ಲಿ ಸಂಪಾಜೆ ಗ್ರಾಮದ ಕೊಪ್ಪತಕಜೆ ರಸ್ತೆ ಕಾಂಕ್ರಿಟೀಕರಣ, ಉದ್ಯೋಗ ಖಾತರಿ ಯೋಜನೆಯಲ್ಲಿ ಎರಡು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪಾಜೆ ಗ್ರಾಮದ ಗೂನಡ್ಕ ಕೊರಂಬಡ್ಕ ರಸ್ತೆ ಕಾಂಕ್ರಿಟೀಕರಣ, ಒಂದು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪಾಜೆ ಗ್ರಾಮದ ದರ್ಕಾಸ್ ಕಾಂಕ್ರಿಟ್ ಚರಂಡಿ ಕಾಮಗಾರಿಗಳ ಉದ್ಘಾಟನೆ ನಡೆಯಿತು.