ಸಂಪಾಜೆ: ಕಳೆದ ಕೆಲವು ವರ್ಷಗಳಿಂದ ಅಧ್ಯಕ್ಷತೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಾರೀ ರಾಜಕೀಯ ಬೆಳವಣಿಗೆಗೆ ವೇದಿಕೆಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ನಲ್ಲಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯೂ ಕುತೂಹಲ ಕೆರಳಿಸಿದೆ. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು ಕಾಂಗ್ರೆಸ್
ಸುಮತಿ, ವಿಮಲ, ಅಬೂಸಾಲಿ, ಎಸ್.ಕೆ.ಹನೀಫ
ಬೆಂಬಲಿತ ಅಭ್ಯರ್ಥಿಗಳ ಮಧ್ಯೆಯೇ ಸ್ಪರ್ಧೆ ಏರ್ಪಡುವುದಕ್ಕೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಇರುವ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮತಿ ಶಕ್ತಿವೇಲು ಹಾಗೂ ವಿಮಲಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಕೆ.ಅಬೂಸಾಲಿ ಹಾಗೂ ಎಸ್.ಕೆ.ಹನೀಫ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಮಯ 11 ಗಂಟೆಗೆ ಕೊನೆಗೊಂಡಿದೆ. ಒಂದು ಗಂಟೆಯ ಬಳಿಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇವರಲ್ಲಿ ನಾಮಪತ್ರ ಹಿಂಪಡೆಯುತ್ತಾರಾ ಅಥವಾ ಸ್ವಪಕ್ಷೀಯರ ಮಧ್ಯೆ ಸ್ಪರ್ಧೆ ನಡೆಯುತ್ತದಾ ಎಂಬ ಕುತೂಹಲ ಮೂಡಿದೆ.