ಸುಳ್ಯ:ಎರಡು ಬಾರಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದ
ಸಂಪಾಜೆ ಗ್ರಾಮ ಪಂಚಾಯತ್ನಲ್ಲಿ ಅಭಿವೃದ್ಧಿ ಪರ್ವ.ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ನೇತೃತ್ವದ ಎರಡೂವರೆ ವರ್ಷದ ಆಡಳಿತ ಅವಧಿಯಲ್ಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಇದೀಗ ಪೂರ್ತಿಯಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಜು.25ರಂದು ಪೂ.10.30ಕ್ಕೆ ನಡೆಯಲಿದೆ. ಗ್ರಾಮದ ವಿವಿಧ ಕಡೆ ಕಾಂಕ್ರೀಟ್ ರಸ್ತೆಗಳ

ಉದ್ಘಾಟನೆ, ಗಡಿಕಲ್ಲು ಅಂಗನವಾಡಿ ಕೇಂದ್ರ ಉದ್ಘಾಟನೆ, ಕಲ್ಲುಗುಂಡಿ ಪೇಟೆಯಲ್ಲಿ ಮೀನು ಮಾರುಕಟ್ಟೆಯ ವಿಸ್ತೃತ ಕಟ್ಟಡ ಉದ್ಘಾಟನೆ, ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ, ಅಂಗವಿಕಲರಿಗೆ ಸಿಂಟೆಕ್ಸ್ ಟ್ಯಾಂಕ್ ವಿತರಣೆ, ಅಂಗವಿಕಲರ ಮನೆಗೆ ಸೋಲಾರ್ ಅಳವಡಿಕೆ, ಪಂಚಾಯತ್ ಕಚೇರಿಯಲ್ಲಿ ಕುಡಿಯುವ ನೀರಿನ ಕೂಲರ್ ಅಳವಡಿಕೆ ಉದ್ಘಾಟನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನಡೆಯಲಿದೆ. ಕಳೆದ ಬಾರಿ ಪ.ಜಾ.ಪ.ಪಂ.ದ ಸುಮಾರು 200 ಕುಟುಂಬಗಳಿಗೆ ಸಿಂಟೆಕ್ಸ್ ನೀರಿನ ಟ್ಯಾಂಕ್, ಅಂಗವಿಕಲರಿಗೆ ಮಂಚ, ಗೋದ್ರೆಜ್ ನೀಡಲಾಗಿತ್ತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ.ಹಮೀದ್ ನೇತೃತ್ವದಲ್ಲಿ ನಡೆದ ಈ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಎಲ್ಲರ ಸಹಕಾರದಿಂದ ಅಭಿವೃದ್ಧಿ-ಜಿ.ಕೆ.ಹಮೀದ್:
ನನ್ನ ಅಧ್ಯಕ್ಷ ಅವಧಿಯಲ್ಲಿ ಸಂಪಾಜೆ ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿ ಗ್ರಾಮ ಆಗುವಲ್ಲಿ ವಿಶೇಷ ಪ್ರಯತ್ನ ಮಾಡಿರುತ್ತೇವೆ. ಗಾಂಧಿ ಗ್ರಾಮ ಪುರಸ್ಕಾರ, ಡಾ.ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳ ಮೂಲಕ ಉತ್ತಮ ಗ್ರಾಮ ಪಂಚಾಯತ್ ಆಗಿ ಮೂಡಿ ಬಂದಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಹೇಳಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ ಕೇಂದ್ರ, ಕಾಂಕ್ರೀಟ್ ರಸ್ತೆ ನಿರ್ಮಾಣ, ಉದ್ಯೋಗ

ಜಿ.ಕೆ.ಹಮೀದ್ ಗೂನಡ್ಕ
ಖಾತರಿ ಯೋಜನೆಯಡಿ ಹಲವು ಕಾಮಗಾರಿಗಳು, ಘನತ್ಯಾಜ್ಯ ಘಟಕ ನಿರ್ಮಾಣ, ಚರಂಡಿ, ರಸ್ತೆ ಕಾಮಗಾರಿ, ಗ್ರಾಮ ಪಂಚಾಯತ್ ಪೀಠೋಪಕರಣ, ಕಂಪ್ಯೂಟರ್, ಸಿ.ಸಿ. ಕ್ಯಾಮೆರಾ, ಪಂಚಾಯತ್ ಆಧುನೀಕರಣ, ಹೂಳೆತ್ತುವ ಕಾಮಗಾರಿ, ಡಿಜಿಟಲ್ ಲೈಬ್ರೆರಿ, ಕೋಟಿ ವೃಕ್ಷ ಅಭಿಯಾನ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ, ಹೆದ್ದಾರಿ ಅಭಿವೃದ್ಧಿ, ಚರಂಡಿ ನಿರ್ಮಾಣ, ವಿದ್ಯುತ್ ಸಬ್ಸ್ಟೇಷನ್ ಜಾಗ ಹಾಗೂ DPR, ಹೆಚ್ಚುವರಿ ಪರಿವರ್ತಕ, ಕಸ ವಿಲೇವಾರಿ ವಾಹನ, ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಬಸ್ಸು ತಂಗುದಾಣ, ಕೊರೋನ, ಭೂಕಂಪ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಸಹಕಾರ ಸ್ಮರಣೀಯ. ಸಚಿವರುಗಳ, ಶಾಸಕರ, ಜಿಲ್ಲೆಯ, ತಾಲೂಕಿನ ಎಲ್ಲಾ ಜನಪ್ರತಿನಿಧಿಗಳ ಅಧಿಕಾರಿ ವರ್ಗದವರ, ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ನಿರಂತರ ಸಹಕಾರದಿಂದ ಪ್ರಗತಿ ಸಾಧ್ಯವಾಯಿತು ಎಂದು ಜಿ.ಕೆ.ಹಮೀದ್ ಹೇಳಿದ್ದಾರೆ.