ಸಂಪಾಜೆ:ಸಂಪಾಜೆ ಕಾಂಗ್ರೆಸ್ ಪಕ್ಷದ ವಲಯ ಪ್ರಮುಖರ ಸಭೆ ಕಲ್ಲುಗುಂಡಿಯಲ್ಲಿ ನಡೆಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಜನರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ರೀತಿಯ ಹೋರಾಟ ನಡೆಸಲು ನಿರ್ಧರಿಸಲಾಯಿತು. ಸಮಸ್ಯೆಗಳ ಪರಿಹಾರಕ್ಕೆ
ಜಿಲ್ಲಾಧಿಕಾರಿ, ಡಿ ಡಿ ಎಲ್ ಆರ್, ಎಡಿ ಎಲ್ ಆರ್, ಬಳಿಗೆ ನಿಯೋಗ ತೆರಳಿ ಫ್ಲಾಟಿಂಗ್, 9/11, ಕನ್ವರ್ಷನ್, 94.ಸಿ, ಜಂಟಿ ಸರ್ವೆ ಬಗೆಗಿನ ಸಮಸ್ಯೆಗಳ ಪರಿಹಾರಕ್ಕಾಗಿ ಬೇಡಿಕೆ ಮುಂದಿರಿಸಲು ತೀರ್ಮಾನಿಸಲಾಯಿತು. ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಾನಿ.ಕೆ.ಪಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ ಮಾತನಾಡಿದರು.
ವಲಯ ಕಾಂಗ್ರೆಸ್ ಉಪಾಧ್ಯಕ್ಷ ವಸಂತ ಪೆಲ್ತಡ್ಕ ,ಪ್ರಧಾನ ಕಾರ್ಯದರ್ಶಿ ಲೂಕಾಸ್ ಟಿ.ಐ, ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಯಮುನಾ ಬಿ.ಎಸ್, ಸದಸ್ಯರಾದ ರಾಜು ಜ್ಞಾನಶೀಲನ್ ,ಪ್ರಮಿಳ ಪೆಲ್ತಡ್ಕ ,ಉಷಾ ನಾಯ್ಕ ಕಾಂತಿ.ಬಿ.ಎಸ್, ಯುವ ಕಾಂಗ್ರೆಸ್ ಅಧ್ಯಕ್ಷ ನಿತಿನ್ ,ಮಹಿಳಾ ಕಂಗ್ರೆಸ್ ಅಧ್ಯಕ್ಷೆ ಲಲನ.ಕೆ.ಆರ್. ಸಾಮಾಜಿಕ ಜಾಲತಾಣದ ಅಧ್ಯಕ್ಷ ಬಾಲಚಂದ್ರ, ಹಿರಿಯ ನಾಯಕರಾದ ಬೆಂಜಮಿನ್ ಡಿಸೋಜ,ತಾಜ್ ಮಹಮ್ಮದ್, ಹಮೀದ್ ಹೆಚ್ ಉಮ್ಮರ್.ಪಿ.ಎ,ನ್ಯಾಯವಾದಿ ಡೊಮಿನಿಕ್ ,ಶಿವಲಿಂಗ ಎರಿಲಡ್ಪು ,ನಾಗಮುತ್ತು ನೆಲ್ಲಿಕುಮೇರಿ, ಕೆರೋಲಿನಾ ಕ್ರಾಸ್ತಾ,ಫಿಲೋಮಿನ ಕ್ರಾಸ್ತ,ಮೈಕಲ್ ಪಾಯಸ್, ಮತ್ತಿರರು ಹಾಜರಿದ್ದರು. ಲೂಕಾಸ್ ಟಿ.ಐ ಸ್ವಾಗತಿಸಿ ,ವಸಂತ ಪೆಲ್ತಡ್ಕ ವಂದಿಸಲಾಯಿತು. ಅಗಲಿದ ಕಾಂಗ್ರೆಸ್ ಮುಖಂಡ ಚಂದ್ರಲಿಂಗಂ, ಆನಂದ ಎಸ್.ಪಿ. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.





