ಕಲ್ಲುಗುಂಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಪಾದಯಾತ್ರೆಯು ಕಲ್ಲುಗುಂಡಿ ಪೇಟೆಯಲ್ಲಿ ಆ.20ರಂದು ನಡೆಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ ಚಾಲನೆ ನೀಡಿದರು. ಬಳಿಕ ಕಲ್ಲುಗುಂಡಿ ಪೇಟೆಯಲ್ಲಿ
ಮೆರವಣಿಗೆ ನಡೆದು ಬಳಿಕ ಸಭೆ ನಡೆಯಿತು.ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ , ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಕೆ.ಪಿ ಜಾನಿ, ಕಾಂಗ್ರೆಸ್ ಮುಖಂಡ ಲಕ್ಷ್ಮೀಶ ಗಬ್ಬಲಡ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಟಿ.ಐ. ಲೂಕಾಸ್, ಗ್ರಾಂ. ಪಂ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಅಧ್ಯಕ್ಷ ಜಿ. ಕೆ ಹಮೀದ್, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಕೆ.ಪಿ.ಸಿ.ಸಿ ವಕ್ತಾರ ಶೌವಾದ್ ಗೂನಡ್ಕ, ಕೊಡಗು ಸಂಪಾಜೆ ವಲಯ

ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ.ಎಲ್, ನಾಪೋಕ್ಲು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ ಕೆ. ಕೆ., ಕೊಡಗು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಪ್ರಮುಖ ಸೂರಜ್ ಹೊಸೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬುಸಾಲಿ, ಸಂಪಾಜೆ ಗ್ರಾಂ.ಪಂ. ಸದಸ್ಯರುಗಳಾದ ಕೆ. ಆರ್ ಜಗದೀಶ್ ರೈ, ಸುಂದರಿ ಮುಂಡಡ್ಕ, ಲಿಸಿ ಮೊನಾಲಿಸಾ, ವಿಮಲಾ ಪ್ರಸಾದ್, ಅನುಪಮಾ, ದ.ಕ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸೊಸೈಟಿಯ ನಿರ್ದೇಶಕರಾದ ಹೆಚ್. ಎ ಹಮೀದ್, ಬಿ.ಎಸ್ ಯಮುನಾ, ಗ್ಯಾರೆಂಟಿ ಸಮಿತಿ ಸದಸ್ಯರುಗಳಾದ ಕಾಂತಿ. ಬಿ. ಎಸ್, ರಾಜು ನೆಲ್ಲಿಕುಮೇರಿ, ಕಾಂಗ್ರೆಸ್ ಪ್ರಮುಖರಾದ ಜಿಲ್ಲಾ ಅಲ್ಪ ಸಂಖ್ಯಾತ ಉಪಾಧ್ಯಕ್ಷ ಇಬ್ರಾಹಿಂ ಎ.ಕೆ ,ರಹೀಂ ಬೀಜದಕಟ್ಟೆ, ಜುಬೈರ್, ಅಣ್ಣಾ ದೊರೈ ಅಡ್ಯಡ್ಕ,ಸತ್ಯ ಕುಮಾರ್ ಅಡಿಂಜ, ಧರ್ಮಪಾಲ ಕೊಯಿಂಗಾಜೆ ,ಹರೀಶ್ ಕೊಯಿಂಗಾಜೆ, ಶಹೀದ್ ಪಾರೆ, ಸಾಸಿರ್ ಉಗ್ರಾಣಿ, ರವಿ ರಾಜ್ ಹೊಸೂರು, ನವೀನ್ ರಾಮಕಜೆ , ವಸಂತ ಪೆಲ್ತಡ್ಕ, ತಾಜ್ ಮೊಹಮ್ಮದ್ ಸಂಪಾಜೆ, ಪಿ. ಎ ಉಮ್ಮರ್ ಗೂನಡ್ಕ, ಶಮೀರ್ ತಾಜ್ ಸಂಪಾಜೆ , ಎ. ಕೆ ಹನೀಫ್, ರಿತಿನ್ ಡೆಮ್ಮಲೆ, ಎಸ್. ಪಿ. ಅಬ್ದುಲ್ ರೆಹಮಾನ್, ಬೆಂಜಮೀನ್ ಡಿಸೋಜಾ, ಶಿವಲಿಂಗ ಎರಕಡಪು , ಸೆಬಾಸ್ಟಿನ್ ನೆಲ್ಲಿಕುಮೇರಿ
ಮತ್ತಿತರು ಉಪಸ್ಥಿತರಿದ್ದರು. ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯದರ್ಶಿ ಲೂಕಸ್ ಟಿ.ಐ ಸ್ವಾಗತಿಸಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ವಂದಿಸಿದರು ಶೌಹಾದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು









